ಕಲಬುರಗಿ | ಸಮಾಜ ಮೆಚ್ಚುವ ಹಾಗೆ ಬದುಕಬೇಕು : ಡಾ.ಶಿವಾನಂದ ಶ್ರೀಗಳು

ಕಲಬುರಗಿ : ನಾವು ಸಾಧನೆಯನ್ನು ಮಾಡಿದರೆ ಮಾತ್ರ ನಮ್ಮ ಬದುಕು ಸಾರ್ಥಕ ಎಂದು ತಿಳಿದುಕೊಳ್ಳಬೇಡಿ, ಸಮಾಜ ಮೆಚ್ಚುವ ಹಾಗೆ ಬದುಕಬೇಕು ನಮ್ಮ ಬದುಕು ಸಾರ್ಥಕ ಎಂದು ವಿರಕ್ತ ಮಠ ಸೊನ್ನದ ಡಾ.ಶಿವಾನಂದ ಮಾಹಾಸ್ವಮಿಗಳು ತಿಳಿಸಿದರು.
ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದ ಶ್ರೀ ಧರ್ಮರಾಯ ದೇವಸ್ಥಾನದಲ್ಲಿ ಪಲ್ಲಕ್ಕಿ ಬಣ್ಣದ ಪ್ರಯುಕ್ತ ಶ್ರೀ ಧರ್ಮರಾಯ ಮುತ್ಯಾನವರ ನೇತೃತ್ವದಲ್ಲಿ ಲಕ್ಷ ದೀಪೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಮಹಾಪುರಾಣ ಕಾರ್ಯಕ್ರಮಗಳು ನಡೆಯುತ್ತಿದೆ. ಡಾ.ಶಿವಾನಂದ ಮಹಾಸ್ವಾಮಿಗಳು ಯಲ್ಲಾಲಿಂಗ ಮಹಾರಜರ ಪುರಾಣ ಪ್ರವಚನ ನಡೆಸಿಕೊಡುತ್ತಿದ್ದಾರೆ.
ಸಮಾಜದಲ್ಲಿ ಮುರು ತರಹದ ಜನರು ಬದುಕುತ್ತಿದ್ದರೆ. ಮೊದಲನೆಯದಾಗಿ ಇಲ್ಲಿಯಂತ ಜನರು, ಇಲ್ಲಿ ಯಾವುದೇ ದವಸದಾನ್ಯದ ಚಿಲಗಳನ್ನು ಸುಮ್ಮನೆ ಬಿಡುವುದಿಲ್ಲ. ಎಲ್ಲವನ್ನು ಕಚ್ಚಿ ಕಚ್ಚಿ ಬಿಡುತ್ತದೆ. ಇಲ್ಲಿಯು ತ್ತಿನುವುದಿಲ್ಲ ಇತ್ತಕಡೆ ನಮಗು ತಿನ್ನಲು ಬಿಡುವುದಿಲ್ಲ. ಅಂದರೆ ನಾನು ತಿನಬಾರದು, ನೀನು ತಿನಬಾರದು ಎಂಬ ಜನರು. ಮತ್ತೋಬ್ಬರು ಸಲಕಿಯಿದಂತೆ, ಎಲ್ಲವು ನನಗೆ ಬೇಕು. ನನ್ನ ಹೋರೆತು ಯಾರಿಗೂ ಸಿಗಬಾರದು. ಅಲ್ಲಿ ಇರುವುದು ಸಂಪೂರ್ಣ ನನಗೆ ಬೇಕು ಎಂಬ ಜನರು ಇದ್ದಾರೆ. ಆದರೆ ಪ್ರಮುಕವಾಗಿ ಮೂರನೆಯವರು, ಇವರು ಗರಗಸ ಇದ್ದಂತೆ. ಗರಗಸ ಮುಂದೆ ಹೋದರು ಮರದ ಕಸ ಕಸ ಬಿಳುತ್ತದೆ, ಹಿಂದೆ ಬಂದರು ಕಸ ಬಿಳುತ್ತದೆ. ಅಂದರೆ ನಾನು ಬದುಕುತ್ತೆನೆ ನೀನು ಬದುಕು. ನಾನು ತಿನ್ನುವೇ ನೀನು ತನ್ನು ಎಂದು ಬದುಕವ ಜನರು. ನಾವು ಸಾಧನೆಯನ್ನ ಮಾಡಿದರೆ ಮಾತ್ರ ನಮ್ಮ ಬದುಕು ಸಾರ್ಥಕ ಎಂದು ತಿಳಿದುಕೊಳ್ಳಬಡಿ. ಸಮಾಜ ಮೆಚ್ಚುವಂಗ ಬದುಕಿದರೆ ಸಾಕು ನಮ್ಮು ಬದುಕು ಸಾರ್ಥಕ ಎಂಬ ವಿಚಾರವನ್ನು ಪುರಾಣದ ಮುಖಾಂತರ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮರಾಯ ದೇವಸ್ಥಾನದ ಪೀಠಾಧಿಪತಿ ಶ್ರೀ ಧರ್ಮರಾಯ ಮುತ್ಯಾ, ಕಲ್ಲೂರ ಕೆಳಗಿನಮಠದ ದೊಡ್ಡಪ್ಪ ಒಡೆಯರ, ಸಣ್ಣಕ್ಕೆಪ್ಪ ಮುತ್ಯಾ, ಸಂಗಣ್ಣ ಮುತ್ಯಾ, ನಿಂಗಣ್ಣ ಮುತ್ಯಾ, ನಾಗಪ್ಪ ಪೂಜಾರಿ ಹೊಸಮನಿ, ವಿಜಯಕುಮಾರ ಹಿರೇಮಠ, ಸದಾನಂದ ಪಾಟೀಲ್, ಸುಧೀಂದ್ರ ಇಜೇರಿ, ಭಿಮಾಶಂಕರ ಜನಿವಾರ, ಮೌನೇಶ ಸೊನ್ನದ, ಪಂಚಯ್ಯ ಹಿರೇಮಠ, ಸಿದ್ದಲಿಂಗ ಪೂಜಾರಿ, ಮಾಳು ಕರಗೊಂಡ, ಲಕ್ಷ್ಮಣ ಪವಾರ, ಶರಣು ನೇರಡಗಿ, ಸಿದ್ದು ಕಾಮನಕೇರಿ, ರಾಜು ಕಿರಣಗಿ, ಭಗವಂತರಾಯ ಬೇಣ್ಣುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







