ಕಲಬುರಗಿ | ಸಹನೆ ಹೊಂದಿರುವ ವ್ಯಕ್ತಿಗಳೇ ಒಳ್ಳೆಯ ನಾಯಕರಾಗಲು ಸಾಧ್ಯ: ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ

ಕಲಬುರಗಿ: ಸಹನೆ ಹೊಂದಿರುವ ವ್ಯಕ್ತಿಗಳೇ ಒಳ್ಳೆಯ ನಾಯಕರಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಹಾಗೂ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಹೇಳಿದರು.
ಮಂಗಳವಾರ ನಗರದ ಸಯ್ಯದ್ ಅಕ್ಬರ್ ಹುಸೈನಿ ಶಾಲೆಯ 2025-2026 ನೇ ಸಾಲಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪರ್ಲ್, ಸಫಿರೆ, ಎಮರಾಲ್ಡ್ ಮತ್ತು ರುಬಿ ಎಂಬ 4 ಹೌಸ್‌ಗಳಿಗೆ ನಾಯಕ ಮತ್ತು ಉಪನಾಯಕರಿಗೆ ಬ್ಯಾಚ್‌ಗಳನ್ನು ತೋಡಿಸುವ ಮೂಲಕ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಮುಹಮ್ಮದ್ ಅಲಿ ಮತ್ತು ಮಿರ್ಜಾ ಉಜೈರ್ ಬೇಗ ಪ್ರಾರ್ಥಿಸಿದರೆ, ವೈಸ್ ಹೆಡ್ ಬಾಯ್ ಹಸನ್ ರಜಾ ಮೂಸ್ವಿ ಸ್ವಾಗತಿಸಿದರು. ವಿದ್ಯಾರ್ಥಿನಿ ಮಜೆಹಾ ಮೆಹ್ರೀನ ವಂದಿಸಿದರೆ, ಹಬೀಬ್ ಉಲ್ಲಾ ಖಾನ್ ಮತ್ತು ಸೈಯದ್ ಹಮೀದಿಲ್ಲಾ ಹುಸೇನಿ ಹಾಗೂ ಹಮ್ಜಾ ಕಮರ ನಿರೂಪಿಸಿದರು.
ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ, ಪ್ರಧಾನ ಕಾರ್ಯದರ್ಶಿ ಪ್ರೊ ಪಠಣ, ಪ್ರಾಥಮಿಕ್ ಮತ್ತು ದ್ವಿತೀಯ ಶಿಕ್ಷಣದ ಕಾರ್ಯದರ್ಶಿ ಬೆನ್ನಿ ಕುರಿಯಾಕೋಸ್, ಸಮ ಉಪ ಕುಲ್ಪತಿ ಪ್ರೊ ಅಷಫಾಕ ಅಹ್ಮದ, ಕುಲಸಚಿವ ಮಿರ್ ವಿಲಾಯತ ಅಲಿ, ಶಾಲೆಯ ಪ್ರಾಂಶುಪಾಲ ಥೋಮಸ ಜೇಮ್ಸ್ ಹಾಗೂ ಎಲ್ಲ ಶಿಕ್ಷಕವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.







