ಕಲಬುರಗಿ | ಆರ್ಟ್ ಲೆಜೆಂಡ್ ಬ್ರಹ್ಮೋಉತ್ಸವಂ ಪ್ರಶಸ್ತಿಗೆ ಚಿತ್ರಕಲಾವಿದ ಕುಂಬಾರ್ ಆಯ್ಕೆ

ಕಲಬುರಗಿ : ಆಂಧ್ರಪ್ರದೇಶದ ಕೋನಸೀಮಾ ಚಿತ್ರಕಲಾ ಪರಿಷದ್ ಅಮಲಾಪೂರಮ್ 35ನೇ ವರ್ಷದ ಬ್ರಹ್ಮೊತ್ಸವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕರ್ನಾಟಕ ರಾಜ್ಯದ ಕಲಬುರಗಿ ಯ ಖ್ಯಾತ ಚಿತ್ರಕಲಾವಿದ ನಾಗರಾಜ್ ಕುಂಬಾರ್ ಅವರು ಆರ್ಟ್ ಲೆಜಂಡ್ ಬ್ರಹ್ಮೋಉತ್ಸವಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜ.19ರಂದು ಅಮಲಾಪುರಮನಲ್ಲಿ ಜರುಗಲಿದೆ ಎಂದು ಕೋನಸೀಮಾ ಚಿತ್ರಕಲಾ ಪರಿಷತ್ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದೇಶದ ನಾನಾ ರಾಜ್ಯಗಳಿಂದ ಒಟ್ಟು 200ಕ್ಕಿಂತ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.
ಪ್ರತಿಷ್ಟಿತ ಪ್ರಶಸ್ತಿ ಆಯ್ಕೆಯಾಗಿರುವ ನಾಗರಾಜ್ ಕುಂಬಾರ್ ಅವರಿಗೆ ಕಲಾವಿದರಾದ ರಾಜಶೇಖರ್ ಶಾಮಣ್ಣ, ರಮೇಶ್ ಜೋಶಿ, ರವಿಂದ್ರ ಬಿರಾಜದಾರ್, ಪ್ರಶಾಂತ್ ಕುಂಬಾರ್, ಶ್ರೀಶೈಲ್ ಕುಂಬಾರ್, ನಾರಾಯಣ್ ಜೋಶಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
Next Story







