ಕಲಬುರಗಿ | ಜಿಲ್ಲಾ ವೈದ್ಯಾಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಮನವಿ

ಕಲಬುರಗಿ: ಜಿಲ್ಲೆಯ ಜಿಲ್ಲಾ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಲು ಒತ್ತಾಯಿಸಿ ಜೈ ಕನ್ನಡಿಗರ ಸೇನೆ ಹಾಗೂ ಜೈ ಕನ್ನಡಿಗರ ರಕ್ಷಣಾ ವೇದಿಕೆ ಜಂಟಿಯಾಗಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜಿಲ್ಲೆಯ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸುಮಾರು ಬಾರಿ ನಕಲಿ ವೈದ್ಯರು ಹೆಚ್ಚಾಗಿರುವ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಅಲ್ಲದೆ ಅವರನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಇವರು ಈ ರೀತಿ ವರ್ತಿಸುವುದು ನೋಡಿದರೆ ಜಿಲ್ಲಾ ವೈದ್ಯಾಧಿಕಾರಿಗಳು ಕೂಡಾ ಈ ವೈದ್ಯರ ಜೋತೆ ಶಾಮಿಲಾಗಿ, ಇವರ ಹತ್ತಿರ ಲಂಚದ ಹಣ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ ಇಂತಹ ಬೇಜವಾಬ್ದಾರಿತನ ಅಧಿಕಾರಿಗಳಿಗೆ ಬೇರೆ ಕಡೆಗೆ ವರ್ಗಾವಣೆ ಮಾಡಿ ನಮ್ಮ ಜಿಲ್ಲೆಗೆ ಒಬ್ಬ ಒಳ್ಳೆಯ ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜೈ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ದತ್ತು ಹೆಚ್. ಭಾಸಗಿ, ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಚಿನ ಫರಹತಾಬಾದ, ನವೀನ ದುಮ್ಮನಸೂರ ಸಾಗರ ಕಿಚ್ಚಾ, ಮಲ್ಲು ಆಲಗೂಡ, ಸುಭಾಷ, ಸಾಗರ, ನವೀನ ಧುಮ್ಮನಸೂರ, ಅನೀಲ ತಳವಾರ, ಸಚಿನ ಫರಹತಾಬಾದ್, ಅಕ್ಷಯಕುಮಾರ, ಚಿಂಟು ಜಮಾದಾರ, ಅಂಕುಶ ಬಿಲ್ಲುರ, ರವಿ ಸಜ್ಜನ್ ಸೇರಿದಂತೆ ಹಲವು ಕಾರ್ಯಕರ್ತಕರು ಉಪಸ್ಥಿತರಿದ್ದರು.





