ಕಲಬುರಗಿ | ಜ.24ರಂದು ಫುಲೆ ರತ್ನ ಪ್ರಶಸ್ತಿ ಪ್ರದಾನ: ಧರ್ಮಣ್ಣಾ ಕೋಣೆಕರ್

ಕಲಬುರಗಿ : ಪ್ರಬುದ್ಧ ಡೆವಲಪ್‌ಮೆಂಟ್ ಫೌಂಡೇಶನ್ ವತಿಯಿಂದ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಫಾತೀಮಾ ಶೇಖ್ ಅವರ ಜನ್ಮದಿನದ ಅಂಗವಾಗಿ ಜ.24ರಂದು ಬೆಳಗ್ಗೆ 11.30ಗಂಟೆಗೆ ನಗರದ ಕನ್ನಡ ಭವನದಲ್ಲಿ "ಫುಲೆ ರತ್ನ ಪ್ರಶಸ್ತಿ" ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ನಿರ್ದೇಶಕರಾದ ಧರ್ಮಣ್ಣಾ ಕೋಣೆಕರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಉಸ್ತಾರಿ ಧುತ್ತರಗಿ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಹಾಗೂ ಭಂತೆ ವರಜ್ಯೋತಿ ಥೇರೊ ಅವರು ಸಾನಿಧ್ಯ ವಹಿಸುವರು ಎಂದರು.
ಕಾರ್ಯಕ್ರಮವನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಬಸವರಾಜ ಮತ್ತಿಮಡು ಅವರು ಉದ್ಘಾಟಿಸುವರು, ಉಪನ್ಯಾಸವನ್ನು ಡಾ.ಪುಟ್ಟಮಣಿ ದೇವಿದಾಸ ಅವರು ನೀಡುವರು, ಫೌಂಡೇಶನ್ ಆಶಾ ಡಿ.ಕೊಣೆಕರ್ ಅವರು ಅಧ್ಯಕ್ಷತೆಯಲ್ಲಿ ವಹಿಸುವರು ಎಂದು ವಿವರಿಸಿದರು.
ಸಮಾರಂಭದಲ್ಲಿ ಸುಭಾಷ್ ಗುತ್ತೇದಾರ, ದೊಡ್ಡಪ್ಪ ಪಾಟೀಲ ನರಿಬೋಳ, ಹೆಣ್ಣೂರ ಶ್ರೀನಿವಾಸ, ಪ್ರೊ.ರಮೇಶ ಲಂಡನಕರ್, ಮೇಯರ್ ವರ್ಷಾ ಜಾನೆ, ಎಸ್.ವಿ.ಪ್ರಸಾರ್ ಮಹಾಗಾಂವ, ಬಿ.ವಿ.ಚಕ್ರವರ್ತಿ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಶಾ ಖನ್ನಾ, ಮರೆಪ್ಪಾ ಮೇತ್ರೆ, ನಾಗರಾಜ ಕುಡಳ್ಳಿ, ಬಸವರಾಜ ಸಾಮ್ರಾಟ, ರಾಣು ಮುದ್ದನಕರ್, ಜಗನ್ನಾಥ ಪಿ. ಕಳಸ್ಕರ್ ಇದ್ದರು.







