ಕಲಬುರಗಿ | ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಕವಿ ಡಾ.ಪಿ.ನಂದಕುಮಾರ್ ಅವರ ಕೃತಿ ಆಯ್ಕೆ

ಕಲಬುರಗಿ : ಚಾಮರಾಜನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯು ಖ್ಯಾತ ಸಾಹಿತಿ-ಕವಿ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ಕೊಡಮಾಡುವ 14ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಕವಿ ಡಾ.ಪಿ.ನಂದಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಡಾ.ಪಿ.ನಂದಕುಮಾರ್ ಅವರು ರಚಿಸಿರುವ "ಹಂಗಿನ ಕಿರೀಟಕ್ಕೆ ಜೋತುಬಿದ್ದ ನಾಲಿಗೆ'' ಎಂಬ ಕವನ ಸಂಕಲನವು ಈ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ರಂಗವಾಹಿನಿ ಸಂಘದ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ತಿಳಿಸಿದ್ದಾರೆ.
ಈ ಪ್ರಶಸ್ತಿಯು ತಲಾ 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಪ್ರಶಸ್ತಿಯ ಪ್ರದಾನ ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





