ಕಲಬುರಗಿ | ಸಾಸಿರನಾಡಿನ ಸಾಧಕ ಪ್ರಶಸ್ತಿಗೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಆಯ್ಕೆ

ಕಲಬುರಗಿ : ಆಳಂದ ತಾಲೂಕಿನ ಮಾದನಹಿಪ್ಪರಗಿಯ ಶ್ರೀಶಿವಲಿಂಗೇಶ್ವರ ವಿರಕ್ತ ಮಠದಿಂದ ಪ್ರತಿವರ್ಷ ನೀಡುವ ಸಾಸಿರನಾಡಿನ ಸಾಧಕ ಪ್ರಶಸ್ತಿಗೆ ಖಜೂರಿ ಗ್ರಾಮದ ಮತ್ತು ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ ಶರಣಪ್ಪ ಢಗೆ ಅವರನ್ನು ಆಯ್ಕೆ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಬುಧವಾರ ಆಹ್ವಾನ ನೀಡಲಾಯಿತು.
ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ.ಶರಣಪ್ಪ ಢಗೆ ಅವರು ಬಡತನದಲ್ಲಿ ಓದಿ ಐಪಿಎಸ್ ಪಾಸು ಮಾಡಿ ರಾಜ್ಯದ ವಿವಿಧ ಕಡೆ ಉತ್ತಮ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ನಮ್ಮ ಭಾಗದವರು, ಉನ್ನತ ಸಾಧನೆಯನ್ನು ಮಾಡಿ ತಾಲೂಕಿಗೆ ಹೆಮ್ಮೆ ಹಾಗೂ ಮಾದರಿ ಆಗಿದ್ದಾರೆ. ಅವರ ಈ ಸಾಧನೆ ಗುರುತಿಸಿ ಜಾತ್ರೆಯ ಸಮಯದಲ್ಲಿ ಈ ಪ್ರಶಸ್ತಿ ಪ್ರದಾನ ಪತ್ರದ ನಾಮಫಲಕ ಹಅಗೂ 15 ಸಾವಿರ ರೂ. ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣು ಅರಳಿಮಾರ, ನಾಗನಾಥ ಕಾವಳೆ, ಬಸವರಾಜ ಅರಳಿಮಾರ ಸಂತೋಷಕುಮಾರ ಸ್ವಾಮಿ ಇದ್ದರು.
Next Story





