ಕಲಬುರಗಿ | ಟ್ರಾಕ್ಟರ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಮೂವರು ಆರೋಪಿಗಳ ಬಂಧನ

ಕಲಬುರಗಿ: ನಗರದ ಹೊರವಲಯದ ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಟ್ರಾಕ್ಟರ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು 11.50 ಲಕ್ಷ ಮೌಲ್ಯದ 3 ಟ್ರಾಕ್ಟರ್ ಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಲಬುರಗಿ ತಾಲೂಕಿನ ಫರಹತಾಬಾದ್ ಗ್ರಾಮದ ನಿವಾಸಿ ರಾಜಶೇಖರ್ ನಾಗಪ್ಪ ಮಂಡರವಾಡ(20), ಹಸರಗುಂಡಗಿ ಗ್ರಾಮದ ನಿವಾಸಿ ರಿಯಾಝ್ ಪಟೇಲ್(25) ಮತ್ತು ಬಂದರವಾಡ ಗ್ರಾಮದ ನಾಗರಾಜ್ ಚಂದ್ರಕಾಂತ್ ಬಾಲಮಾರ್(25) ಬಂಧಿತ ಆರೋಪಿಗಳು.
ಹಾಗರಗುಂಡಗಿ ಗ್ರಾಮದ ಗುಂಡಪ್ಪ ಹಣಮಂತ ನೀಲೂರ್ ಕೆಂಪು ಬಣ್ಣದ ಟ್ರಾಕ್ಟರ್ ಕಳ್ಳತನವಾಗಿರುವ ಬಗ್ಗೆ ಫರಹತಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಒಟ್ಟು 11.50 ಲಕ್ಷ ಮೌಲ್ಯದ 3 ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Next Story





