Kalaburagi | ‘ದಲಿತರು ಬಲಿತರಾದರೆ ನಿನಗೇನು ನೋವು ಕುಮಾರಣ್ಣಾ!’ ಘೋಷವಾಕ್ಯದೊಂದಿಗೆ ಪೋಸ್ಟರ್ ಅಭಿಯಾನ

ಕಲಬುರಗಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಸೇಡಂ ಘಟಕದ ವತಿಯಿಂದ ‘ದಲಿತರು ಬಲಿತರಾದರೆ ನಿನಗೇನು ನೋವು ಕುಮಾರಣ್ಣಾ!’ ಎಂಬ ಘೋಷವಾಕ್ಯದೊಂದಿಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಆವರಣದಲ್ಲಿ ಪೋಸ್ಟರ್ ಅಭಿಯಾನ ನಡೆಸಲಾಯಿತು.
ದಲಿತರ ಸಬಲೀಕರಣ ಹಾಗೂ ಅವರ ಹಕ್ಕುಗಳ ವಿಚಾರವಾಗಿ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಕಾಳಗಿ, ರಾಘವೇಂದ್ರ ವಾಲಿಕಾರ, ಈರಪ್ಪ ಗುಂಡಗುರ್ತಿ, ಸುರೇಶ ಚಾವ್ಹಾಣ್, ಪ್ರಶಾಂತ ಸೇಡಂಕರ್, ಅರುಣ್ ಮುಡಬೂಳಕರ್, ಶ್ರೀಕಾಂತ್ ಜಾಪನೂರ, ಜಗನ್ನಾಥ ಬೀಜನಹಳ್ಳಿಕರ್, ಮಹಾದೇವ ಉಡ್ಗಿ, ನಾಗೇಶ ಮದನಕರ, ಸುರೇಶ ಇವಣಿ, ಶ್ರೀನಿವಾಸ ಹೊಸೂರಕರ್ ಹಾಗೂ ಬಸವರಾಜ ಕಟ್ಟಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story




