ಕಲಬುರಗಿ | ಮೇ 7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ 33/11ಕೆವ್ಹಿ ಆಜಾದಪೂರ ಉಪ-ಕೇಂದ್ರದ 33ಕೆವ್ಹಿ ಇನ್‍ಕಮರ್ ಲೈನ್ ಮತ್ತು 5 ಎಮ್.ವಿ.ಎ. ವಿದ್ಯುತ್ ಪರಿವರ್ತಕ-2ರ ಗ್ಯಾಸ್ ಲೀಕೇಜ್ ಅರೇಸ್ಟಿಂಗ್, ಕಾಮಗಾರಿ ಮತ್ತು ಉಪ-ಕೇಂದ್ರದ ನಿರ್ವಹಣಾ ಕಾರ್ಯಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಮೇ 7ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಕೆಳಕಂಡ ಫೀಡರ್ ಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
33/11ಕೆವಿ ಆಜಾದಪೂರ ಎಮ್.ಯು.ಎಸ್.ಎಸ್ ವಿದ್ಯುತ್ ವಿತರಣಾ ಕೇಂದ್ರ:
ಎಫ್-1 ರಾಮನಗರ, ಎಫ್-2 ಆಜಾದಪೂರ ಎನ್.ಜೆ.ವೈ. ಮತ್ತು ಎಫ್-5 ಹಾಗರಗಾ ಐಪಿ ಫೀಡರಿನ ಆಜಾದಪೂರ, ಹಾಗರಗಾ, ಖಾಜಾ ಕೋಟನೂರ, ಇಟಗಾ, ಕಲ್ಲಬೆನ್ನೂರ, ಬೊಳೆವಾಡ, ಮತ್ತು ಶ್ರೀನಿವಾಸ ಸರಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು.





