ಕಲಬುರಗಿ | ನ.6 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಬಸವೇಶ್ವರ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ನ.6ರಂದು ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಬಸವೇಶ್ವರ ಫೀಡರ್:
ನವಾಬ್ ಸಾಬ್ ಮೊಹಲ್ಲಾ, ಗುರುಸ್ನಾಯ್ ಕಾಲೋನಿ, ಚುನ್ನಾಭಟ್ಟಿ, ನ್ಯೂ ರಹೆಮತ್ ನಗರ, ಪೀರ್ದೋಸ್ ಕಾಲೋನಿ, ಬಸವಣ್ಣ ಕಟ್ಟಾ, ಝಮ್‍ಝಮ್ ಕಾಲೋನಿ, ಸಿಟಿ ಸ್ಕೂಲ್, ಸಭಾ ಫಂಕ್ಷನ್ ಹಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
Next Story





