ಕಲಬುರಗಿ | ಸೆ.9 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವ್ಯಾಪ್ತಿಯ 110/33/11 ಕೆವ್ಹಿ ಆಳಂದ, ವಿದ್ಯುತ್ ವಿತರಣಾ ಕೇಂದ್ರದ ಪರಿವರ್ತಕ-2ರ ನಿರ್ವಹಣೆ ಕೆಲಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇದೇ ಸೆ. 9 ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಎಲ್ಲಾ ಹೊರ ಹೊಗುವ 33 ಕೆ.ವಿ ಮತ್ತು 11ಕೆ. ಫೀಡರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ತಡಕಲ ಮತ್ತು ಖಜೂರಿ ವಿದ್ಯುತ್ ವಿತರಣಾ ಕೇಂದ್ರ :
ಎಫ್-1 ಮುನ್ನೋಳ್ಳಿ, ಎಫ್-2 ತಡಕಲ್ ಐಪಿ, ಎಫ್-3 ದೇಗಾಂವ ಎನ್‍ಜೆವೈ, ಎಫ್-4 ಕಣಮಸ ಐಪಿ, ಎಫ್-5 ಬೆಳಮಗಿ ಐಪಿ, ಎಫ್-6 ನಸೀರವಾಡಿ ಎನಜೆವಾಯ ಹಾಗೂ ಎಫ್-1 ಅಳಂಗಾ, ಎನ್‍ಜೆವೈ, ಎಫ್-2 ತಡೊಳಾ ಐಪಿ, ಎಫ್-3 ಸೀರೂರ ಐಪಿ, ಎಫ್-4 ಹೂದಲೂರ ಐಪಿ ಎಫ್-5 ಬಬಲೇಶ್ವರ, ಎಫ್-6 ಖಜೂರಿ, ಎನ್‍ಜೆವೈ, ಎಫ್-7 ಆನೂರ ಎನಜೆವೈ ಫೀಡರ್‍ಗಳ ವ್ಯಾಪ್ತಿಯ ಮುನ್ನೋಳ್ಳಿ, ಶುಕ್ರವಾಡಿ, ಬಸವನ ಸಂಗೊಳಗಿ, ದೇಗಾಂವ, ತಡಕಲ್, ಹಾಳ ತಡಕಲ್, ಬೆಳಮಗಿ, ಸನಗುಂದಾ, ವಳವಂತವಾಡಿ, ಖಣಮಸ್, ನಾಸಿರವಾಡಿ ಖಜೂರಿ, ಬಬಲೇಶ್ವರ, ಅಲಂಗಾ, ಸೀರೂರ (ಜಿ), ಗದಲೆಗಾಂವ, ತಡೊಲಾ, ಖಂಡಾಳ (ಜೆ), ಜಮಗಾ (ಕೆ), ಜವಳಗಾ (ಜೆ), ಹೊದಲೂರ, ಆನೂರ, ತುಗಾಂವ.
ಜಿಡಗಾ ವಿದ್ಯುತ್ ವಿತರಣಾ ಕೇಂದ್ರ :
ಎಫ್-1 ಕವಲಗಾ ಐಪಿ, ಎಫ್-2 ಸಂಗೊಳಗಿ ಎನ್.ಜೆ.ವೈ, ಎಫ್-3 ಅಲ್ಲಾಪೂರ ಎನ್.ಜೆ.ವೈ. ಎಫ್-4 ಜಿಡಗಾ (ಐಪಿ ಸೆಟ್) ಜಮಗಾ(ಜೆ), ಜಿಡಗಾ, ಮೋಘಾ(ಬಿ). ಮೋಘಾ(ಕೆ), ಈಕ್ಕಳಕಿ ಮತ್ತು ಅಲ್ಲಾಪೂರ, ಕವಲಗಾ, ಕಾತರಾಬಾದ, ರಾಜೊಳ, ಭೂಸನೂರ ತಾಂಡಾ ಹಾಗೂ ಸಂಗೊಳಗಿ ತಾಂಡಾ.







