ಕಲಬುರಗಿ | ಕಳ್ಳಭಟ್ಟಿ ಸಾರಾಯಿ, ಅಕ್ರಮ ಶೇಂದಿ ಸಂಗ್ರಹ, ಮಾರಾಟ ತಡೆಗಟ್ಟಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ: ಕಳ್ಳಭಟ್ಟಿ ಸಾರಾಯಿ ಮತ್ತು ನಕಲಿ ಮದ್ಯ, ಅಕ್ರಮ ಶೇಂದಿ ಸಂಗ್ರಹ ಮತ್ತು ಮಾರಾಟವನ್ನು ತಡೆಗಟ್ಟಲು ಪ್ರತಿಯೊಬ್ಬ ಅಧಿಕಾರಿಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ, ಅಕ್ರಮ ಶೇಂದಿ ಸಂಗ್ರಹ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರಚಿಸಲಾದ ಸ್ಥಾಯಿ ಸಮಿತಿ ಸಭೆ ನಡೆಸುವ ಕುರಿತು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಿಶೇಷವಾಗಿ ತಾಂಡಗಳು ಮತ್ತು ಸ್ಲಂ ಏರಿಯಾಗಳು ಕೆಲವೊಂದು ಸಣ್ಣಪುಟ್ಟ ಪ್ರದೇಶಗಳಲ್ಲಿ ಹಣವನ್ನುಗಳಿಸುವ ದುರಾಸೆಗೆ ಒಳಗಾಗಿ ಅಕ್ರಮವಾಗಿ ನಕಲಿ ಮದ್ಯ ಮಾರಾಟ, ಅಕ್ರಮ ಶೇಂದಿ ಮಾರಾಟದಂತಹ ಅಕ್ರಮ ಚಟುವಟಿಕೆಗಳ ವಿರುದ್ಧವಾಗಿ ಅಬಕಾರಿ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಾಗ ಮಾತ್ರ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಎಂದರು.
ಕಳ್ಳಭಟ್ಟಿ ಸಾರಯಿಯಲ್ಲಿ ದಾಖಲಾದ ಪ್ರಕರಣಗಳ ವಿವರ :
2022-23 ರಲ್ಲಿ ಕಳ್ಳಭಟ್ಟಿ ಸರಾಯಿಯಲ್ಲಿ 43 ಪ್ರಕರಣಗನ್ನು ದಾಖಲಿಸಿ 206 ಲೀ. ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿ ಮಾಡಲಾಯಿತು. 2023-24 ರಲ್ಲಿ 25 ಪ್ರಕರಣಗಳನ್ನು ದಾಖಲಿಸಿ 108 ಲೀ 2024-25 ರಲ್ಲಿ 19 ಪ್ರಕರಣಗಳನ್ನು ದಾಖಲಿಸಿ 83 ಲೀ ಜಪ್ತಿಯನ್ನು ಮಾಡಲಾಯಿತು.
ಅಕ್ರಮ ಶೀದಿ ಕುರಿತು ದಾಖಲಾದ ಪ್ರಕರಣಗಳ ವಿವರ :
2022-23 ರಲ್ಲಿ 66 ಪ್ರಕರಣಗಳನ್ನು ದಾಖಲಿಸಿ 2,428 ಲೀಟರ್ ಅಕ್ರಮ ಶೇಂದಿಯ ಮುದ್ದೆಮಾಲನ್ನು ಜಪ್ತಿಮಾಡಲಾಯಿತು. 2023-24 ರಲ್ಲಿ 57 ಪ್ರಕರಣಗಳನ್ನು ದಾಖಲಿಸಿ 2,513 ಲೀಟರ್, 2024-25 ರಲ್ಲಿ 29 ಪ್ರಕರಣಗಳ್ನು ದಾಖಲಿಸಿ 1,413 ಲೀಟರ್ ಜಪ್ತಿ ಮತ್ತು ಮುದ್ದೆಮಾಲನ್ನು ಜಪ್ತಿಯನ್ನು ಮಾಡಲಾಯಿತು ಎಂದು ಅಬಕಾರಿ ಅಧೀಕ್ಷಕರು ರವೀಂದ್ರ ಪಾಟೀಲ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆ ಮಾಹಿತಿ ನೀಡಿದರೆ, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಗಳಿಗೆ ಭೇಟಿ ನೀಡಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ವೇದಿಕೆ ಮೇಲೆ ಡಿಸಿಪಿ ಕನಿಕಾ ಸಿಕ್ರಿವಾಲ, ಅಬಕಾರಿ ಅಧೀಕ್ಷರಾದ ಎಚ್.ಎಸ್. ವಜ್ರಮಟ್ಟಿ, ಅಬಕಾರಿ ಉಪ ಅಧೀಕ್ಷಕರಾದ ರವೀಂದ್ರ ಪಾಟೀಲ್, ಅಬಕಾರಿ ಅಧೀಕ್ಷಕ ರಾಮನ ಗೌಡ, ಶಹಾಬಾದ ಡಿವೈಎಸ್‍ಪಿ ಶಂಕರ ಗೌಡ ಪಾಟೀಲ, ಚಿಂಚೋಳಿ ಡಿವೈಎಸ್‍ಪಿ ಹಿರೇಮಠ ಸೇರಿದಂತೆ ಎಲ್ಲ ತಾಲ್ಲೂಕುಗಳ ವಲಯ ಅಬಕಾರಿ ನಿರೀಕ್ಷಕರು ಹಾಜರಿದ್ದರು.







