ಕಲಬುರಗಿ | ಬುದ್ಧ, ಧಮ್ಮ ಪುಸ್ತಕಗಳ ಮೆರವಣಿಗೆ

ಕಲಬುರಗಿ: ಬಸವ ನಗರದ ರಾಹುಲ್ ಯುವಕ ಸಂಘದಿಂದ ವರ್ಷಾ ವಾಸ ನಿಮಿತ್ತ ಬುದ್ಧನ ಮೂಲ ಬೋಧನೆ ಉಳ್ಳ ತ್ರಿಪಿಠಕ ಪುಸ್ತಕ ಮತ್ತು ಬಾಬಾಸಾಹೇಬರು ಬರೆದ ಬುದ್ಧ ಮತ್ತು ಆತನ ಧಮ್ಮ ಪುಸ್ತಕಗಳು ಉಪಾಸಕರು ತಲೆಯ ಮೇಲೆ ಇಟ್ಟುಕೊಂಡು ಮೆರವಣಿಗೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಸೂರ್ಯಕಾಂತ ನಿಂಬಾಳ್ಕರ್, ಗುರುಪೂರ್ಣಿಮೆಯ ಮಹತ್ವ ತಿಳಿಸಿದರು. ನಂತರ ಈ ದಿನದ ಮತ್ತು ತ್ರಿಪಿಠಕಗಳ ಬಗ್ಗೆ ಹಣಮಂತ ಭೋಧನಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮ ಬೆಳಕೋಟಿ, ವಿಷ್ಣು ಹುಮನಾಬಾದ, ಅಶೋಕ್ ಹಿರೋಳಿ, ದೆವೇಂದ್ರ ಸಿನ್ನೂರ, ಸಂಘದ ಅಧ್ಯಕ್ಷ ಶಶಿಕಾಂತ, ಅಂಬರಾಯ ಹಡಗಿಲ್, ಸಂಜು ಟಿ.ಮಾಲೆ, ರೇಣುಕಾ ಹೋಳಕರ್, ಮಧುಮತಿ ಕಾಂಬಳೆ, ಸರಸ್ವತಿ ಸಿನೂರ್, ಜಯಶ್ರೀ ಬೆಣ್ಣೂರ, ರಮಾಬಾಯಿ ನಾಟೇಕರ್, ಕಸ್ತೂರಿಬಾಯಿ ಬಿಲಗುಂದಿ, ಬಾಬುರಾವ್ ಕಾಂಬಳೆ ಉಪಸ್ಥಿತರಿದ್ದರು.
ಮಹೇಶ್ ಬೆಡ್ಜಿರ್ಗಿ ನಿರೂಪಿಸಿದರು, ವಂದರ್ಪರ್ಪಣೆ ಶಿವಕುಮಾರ್ ನಂದಿ ಮಾಡಿದರು.
Next Story





