ಕಲಬುರಗಿ | ಎಸ್‌ಐಆರ್ ಮ್ಯಾಪಿಂಗ್ ಮಾಡಲು ಬಿಎಲ್‌ಓಗಳಿಗೆ ಮಾಹಿತಿ ನೀಡಿ : ಆಯುಕ್ತ ಅವಿನಾಶ್ ಶಿಂಧೆ

ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಭಾಗವಾಗಿ 2002ರಲ್ಲಿದ್ದ ಮತದಾರರನ್ನು ಪ್ರಸ್ತುತ ಗುರುತಿಸಿ ಮತದಾರರ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ಪೂರ್ಣಗೊಳಿಸಬೇಕಾಗಿರುವುದರಿಂದ ಜ.16 ಮತ್ತು 17 ರಂದು ಮತಗಟ್ಟೆ ಹಂತದ ಅಧಿಕಾರಿಗಳು(ಬಿ.ಎಲ್.ಒ.) ಮನೆಗೆ ಬೇಟಿ ನೀಡಿದಾಗ ಅಗತ್ಯ ಮಾಹಿತಿ ನೀಡುವಂತೆ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬಿ.ಎಲ್.ಓ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಹಿಂದೆ 2002ರಲ್ಲಿ ತಾವು ಮತದಾನ ಮಾಡಿರುವ ಕುರಿತು ಮತದಾರರ ಗುರುತಿನ ಚೀಟಿ, ಮತದಾನ ಕೇಂದ್ರ ಹೆಸರು ಮತ್ತು ಮತದಾನ ಮಾಡಿದ ಸ್ಥಳದ ಮಾಹಿತಿ ನೀಡಬೇಕೆಂದು ಅವರು ಕೋರಿದ್ದಾರೆ.
Next Story





