Kalaburagi | ಶಿಕ್ಷಕರ ಮೇಲಿನ ಅನ್ಯ ಕಾರ್ಯಗಳ ಹೊರೆ ಕಡಿಮೆ ಮಾಡಿ: ಪ್ರಫುಲ್ ಶಶೀಲ್ ನಮೋಶಿ
ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ

ಕಲಬುರಗಿ: ಶಿಕ್ಷಕರಿಗೆ ಪಾಠ ಬೋಧನೆಗಿಂತ ಅನ್ಯ ಕಾರ್ಯಗಳ ಹೊರೆ ಹೆಚ್ಚಾಗಿದ್ದು, ಕಲಿಕಾ ವಾತಾವರಣಕ್ಕಿಂತ ಆನ್‌ಲೈನ್ ಕೆಲಸಗಳು ಜಾಸ್ತಿಯಾಗಿವೆ. ಇದನ್ನು ತಪ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಎನ್‌ಪಿಎಸ್ ನಿರ್ದೇಶಕ ಪ್ರಫುಲ್ ಶಶೀಲ್ ನಮೋಶಿ ಸರ್ಕಾರಕ್ಕೆ ಮನವಿ ಮಾಡಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ’ ಕುರಿತ ವಿಚಾರಗೋಷ್ಠಿ ಹಾಗೂ ಜಿಲ್ಲೆಯ ಸಾಧಕ ಶಿಕ್ಷಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಸಮಾಜದ ನಿಜವಾದ ಕಣ್ಣುಗಳಾಗಿದ್ದು, ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಶ್ರೇಷ್ಠ ಮಾರ್ಗದರ್ಶಕರು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣೇತರ ಕೆಲಸಗಳು ಮತ್ತು ಆನ್‌ಲೈನ್ ಪ್ರಕ್ರಿಯೆಗಳ ಒತ್ತಡದಿಂದ ಶಿಕ್ಷಕರು ಮೂಲ ಕರ್ತವ್ಯವಾದ ಬೋಧನೆಗೆ ಬೇಕಾದಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದ್ದರಿಂದ ಶಿಕ್ಷಕರು ಸತತ ಅಧ್ಯಯನಶೀಲರಾಗಿದ್ದು, ಚಾರಿತ್ರ್ಯವಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶಿಕ್ಷಕರು ನಾಡಿನ ಸಾಂಸ್ಕೃತಿಕ ಬೆಳವಣಿಗೆಯ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಸಮಾಜದ ಸಂಸ್ಕಾರ, ಸಂಸ್ಕೃತಿ, ಕಲೆ ಮತ್ತು ಸಾಹಿತ್ಯದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹತ್ವದ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಜಿಲ್ಲಾ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ, ಸಾವಿತ್ರಿಬಾಯಿ ಫುಲೆ ಶಿಕ್ಷಕೀಯರ ಸಂಘದ ಅಧ್ಯಕ್ಷೆ ಸೇವಂತಾ ಚವ್ಹಾಣ, ಜಿಲ್ಲಾ ಸರಕಾರಿ ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಭೋಜನಗೌಡ ಪಾಟೀಲ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಸಿದ್ಧಲಿಂಗ ಬಾಳಿ, ಶಿವಲೀಲಾ ಕಲಗುರ್ಕಿ, ಬಿ.ಎಂ. ಪಾಟೀಲ ಕಲ್ಲೂರ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ಗಣೇಶ ಚಿನ್ನಾಕಾರ ಮಾತನಾಡಿದರು. ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ನಿಂಗಪ್ಪ ಮಂಗೊAಡ ಹಾಗೂ ಮಾಜಿ ಪ್ರದಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಪೂಜಾರಿ, ಜಯಶ್ರೀ ಜಮಾದಾರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ :
ಅಕ್ಷರಗಳಿಂದ ಅರ್ಥಜ್ಯೋತಿ ಬೆಳಗುವ ಗೌರವದ ಗುರುಗಳಾದ ಡಾ. ಗುರುಪ್ರಕಾಶ ಹೂಗಾರ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಗಿರಿಜಾಬಾಯಿ ಗುಜಗೊಂಡ, ಮೀನಾಕ್ಷಿ ಶೇಷಮೂರ್ತಿ ಅವಧಾನಿ, ಶರಣು ಬಿರಾದಾರ, ಶಿವಾನಂದ ನಿರವಾಣಿ, ಭೋಜನಗೌಡ ಪಾಟೀಲ, ದೌಲತರಾಯ ದೇಸಾಯಿ, ವಿಜಯಕುಮಾರ ಪಾಟೀಲ, ಮರೆಪ್ಪ ಬಸವಪಟ್ಟಣ, ರಮೇಶಕುಮಾರ ದೇವಣಿ, ಜೆ.ಹೆಚ್. ಪಾಟಿಲ, ಪರಮೇಶ್ವರ ಪಾಟೀಲ, ಶಾರದಾ ದೇಸಾಯಿ, ಪ್ರಕಾಶ ಕೋಟ್ರೆ ಈರಮ್ನ ಸುತಾರ, ರಾಜಶೇಖರ ಸಜ್ಜಿ, ವಿಶಾಲಾ ಕಾಟಾಪೂರ, ದೇವಿದಾಸ ಪವಾರ, ಮಹಾಂತೇಶ್ವರಿ ಕಟ್ಟಿಮನಿ, ಭೀಮಾಶಂಕರ ಮಡಿವಾಳ, ಸುನಂದಾ ಕುಲಕರ್ಣಿ, ಮೈತ್ರಾಬಾಯಿ ಪತ್ತಾರ, ಡಾ. ಅನ್ನಪೂರ್ಣ ಗಂಗಾಣಿ, ವಿಶಾಲಾ ಕಾಟಾಪೂರ ಅವರನ್ನು ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.






