ಕಲಬುರಗಿ | ಡಿ.23ರಂದು ಚೆನ್ನವೀರ ಕಣವಿ, ಪ್ರೊ.ಚಂದ್ರಶೇಖರ ಪಾಟೀಲ ಅವರ ಸಂಪುಟಗಳ ಲೋಕಾರ್ಪಣೆ

ಚನ್ನವೀರ ಕಣವಿ, ಚಂದ್ರಶೇಖರ್ ಪಾಟೀಲ್
ಕಲಬುರಗಿ: ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ ಹಾಗೂ ಪ್ರೊ.ಚಂದ್ರಶೇಖರ ಪಾಟೀಲ ಅವರ ಸಂಪುಟಗಳ ಲೋಕಾರ್ಪಣೆ, ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ಮನೆಗೊಂದು ಗ್ರಂಥಾಲಯ, ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಸಮಾರಂಭ ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್. ಉಡಿಕೇರಿ ಅವರು ಉದ್ಘಾಟಿಸಿ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಖ್ಯಾತ ಸಾಹಿತಿ ಮತ್ತು ಪ್ರೊ.ಚಂದ್ರಶೇಖರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟದ ಸಂಪಾದಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಉಚಿತ ಪುಸ್ತಕಗಳನ್ನು ಮತ್ತು ಚೆನ್ನವೀರ ಕಣವಿ ಸಮಗ್ರ ಸಾಹಿತ್ಯ ಸಂಪುಟದ ಸಂಪಾದಕ ಡಾ. ಜಿ.ಎಂ.ಹೆಗಡೆ ಅವರು ಕಲಬುರಗಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ ಮಾಡಲಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಅವರು ಸಂಪುಟಗಳ ಕುರಿತು ಮಾತನಾಡಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರೊ.ಚಂದ್ರಶೇಖರ ಪಾಟೀಲ ಹಾಗೂ ಚೆನ್ನವೀರ ಕಣವಿ ಅವರ ಕುಟುಂಬ ಸದಸ್ಯರುಗಳಾದ ನೀಲಾ ಪಾಟೀಲ್, ಪ್ರಿಯದರ್ಶಿ ಕಣವಿ, ಪ್ರೊ.ಚಂದ್ರಶೇಖರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟಗಳ ಸಹ ಸಂಪಾದಕ ಡಾ.ಮಂಜುನಾಥ ಟಿ., ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯ ಡಾ.ಸುರೇಶ ಜಂಗೆ, ಸಿಂಡಿಕೇಟ್ ಸದಸ್ಯ ಉದಯ ಬಿ.ಪಾಟೀಲ್ ಅವರು ಉಪಸ್ಥಿತರಿರಲಿದ್ದಾರೆ.







