ಕಲಬುರಗಿ | ಹಳೆಯ ಮೆಕ್ಯಾನಿಕಲ್ ವಿದ್ಯುತ್ ಮಾಪಕವನ್ನು ಬದಲಾಯಿಸಿ ಹೊಸ ಸ್ಟ್ಯಾಟಿಕ್ ಮಾಪಕ ಅಳವಡಿಕೆ: ಗ್ರಾಹಕರು ಸಹಕರಿಸಲು ಜೆಸ್ಕಾಂ ಸೂಚನೆ

ಕಲಬುರಗಿ: ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯು ಕಲಬುರಗಿ ನಗರದಲ್ಲಿರುವ ಹಾಲಿ ಹಳೆಯ ಮೆಕ್ಯಾನಿಕಲ್ ವಿದ್ಯುತ್ ಮಾಪಕಗಳನ್ನು ಬದಲಾಯಿಸಿ ಹೊಸ ಸ್ಟ್ಯಾಟಿಕ್ ಮಾಪಕಗಳನ್ನು ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಈ ಯೋಜನೆಯನ್ನು ಎಮ್/ಎಸ್. ವಿಶ್ವಿನ್ ಕಂಪನಿ (M/s.VISHVIN COMPANY) ಇವರಿಗೆ ವಹಿಸಿ ಅನುಮೋದನೆ ನೀಡಲಾಗಿದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಕಲಬುರಗಿ ನಗರದ ವ್ಯಾಪ್ತಿಯ ವಿದ್ಯುತ್ ಬಳಕೆದಾರರು, ಗ್ರಾಹಕರು ಹಳೆಯ ಮೆಕ್ಯಾನಿಕಲ್ ಮಾಪಕವನ್ನು ಬದಲಾಯಿಸಲು ಸಹಕರಿಸಬೇಕು. ಗ್ರಾಹಕರು ತಮ್ಮ ಮಾಪಕ ಬದಲಾಯಿಸಲು ವಿನ:ಕಾರಣ ನಿರಾಕರಿಸಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Next Story





