Kalaburagi | ರೋಟರಿ ಕ್ಲಬ್ಸ್ ವತಿಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣೆ

ಕಲಬುರಗಿ : ಸಮಾಜದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೋಟರಿ ಕ್ಲಬ್ಸ್ ಆಫ್ ಗುಲ್ಬರ್ಗಾ ನೇತೃತ್ವದಲ್ಲಿ ನಗರದ ರೋಟರಿ ಕ್ಲಬ್ ಪಾಲ್ ಹ್ಯಾರಿಸ್ ಆಡಿಟೋರಿಯಂನಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್‌ಬಿಐ ಆರ್‌ಸೆಟಿ ಕಲಬುರಗಿಯ ನಿರ್ದೇಶಕರಾದ ನಂದಕಿಶೋರ್ ಮಳಖೇಡಕರ್ ಭಾಗವಹಿಸಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ಕರೆ ನೀಡಿದರು.
ಗೌರವ ಅತಿಥಿಗಳಾಗಿ ಆರ್‌ಟಿಎನ್. ಮಣಿಲಾಲ್ ಶಾ (ಪಿಡಿಜಿ), ಆರ್‌ಟಿಎನ್. ಡಾ. ಗೌತಮ್ ಜಹಗೀರದಾರ (ಪಿಡಿಜಿ), ಆರ್‌ಟಿಎನ್. ಮಾಣಿಕ್ ಪವಾರ್ (ಪಿಡಿಜಿ) ಹಾಗೂ ಆರ್‌ಟಿಎನ್. ಸಿಎ ಮಾಣಿಕ್ ಮಂಡಕನಳ್ಳಿ (ಎಜಿ, ವಲಯ XI) ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಆಫ್ ಗುಲ್ಬರ್ಗಾ, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ನಾರ್ತ್, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‌ಟೌನ್, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಸನ್‌ಸಿಟಿ, ರೋಟರಿ ಕ್ಲಬ್ ಆಫ್ ಗುಲ್ಬರ್ಗಾ ಸೌತ್ ಹಾಗೂ ರೋಟರಿ ಕ್ಲಬ್ ಆಫ್ ದಿ ರೋಸ್‌ಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದು, ನಂತರ ಫೆಲೋಶಿಪ್ ಕಾರ್ಯಕ್ರಮ ನಡೆಯಿತು.






