ಕಲಬುರಗಿ | ಗ್ರಾಮೀಣ ಬಾಸ್ಕೆಟ್ ಬಾಲ್ ಲೀಗ್ ಉದ್ಘಾಟನೆ

ಕಲಬುರಗಿ: ಇಲ್ಲಿನ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಹಾಗೂ ಕಲಬುರಗಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಗೆ ಚಾಲನೆ ನೀಡಲಾಯಿತು.
ಪಂದ್ಯಾಟಗಳ ಉದ್ಘಾಟನೆಯನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಡಾ.ರಾಜಕುಮಾರ್, ಡಾ.ಶಂಕರ್ ಸೂರೆ, ಮಲ್ಲಿಕಾರ್ಜುನ ಉದ್ನೂರ್, ಚಂದ್ರಕಾಂತ್ ಶಿರೋಳಿ, ಬಾಸ್ಕೆಟ್‌ಬಾಲ್ ತರಬೇತುದಾರರಾದ ಪ್ರವೀಣ್ ಕುಮಾರ್ ಪುಣೆ, ಕುವೆಂಪು ಬಾಸ್ಕೆಟ್‌ಬಾಲ್ ಕ್ಲಬ್ ಅಧ್ಯಕ್ಷರಾದ ಮಹೇಶ್ ಪವಾರ್, ಭಗವಾನ್ ಬಾಸ್ಕೆಟ್‌ಬಾಲ್ ಕ್ಲಬ್ ಅಧ್ಯಕ್ಷರಾದ ಭರತ್ ಭೂಷಣ್, ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ.ಪ್ರತಾಪ್ ಸಿಂಗ್ ತಿವಾರಿ, ಅಕ್ಕಮಹಾದೇವಿ ಬಾಸ್ಕೆಟ್‌ಬಾಲ್ ಕ್ಲಬ್ ಅಧ್ಯಕ್ಷರಾದ ವಿಕಾಸ್ ಭಾಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಲೀಗ್ ಪಂದ್ಯಾಟದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಕ್ಕಮಹಾದೇವಿ ಬಾಸ್ಕೆಟ್‌ಬಾಲ್ ಕ್ಲಬ್, ಭಗವಾನ್ ಬಾಸ್ಕೆಟ್‌ಬಾಲ್ ಕ್ಲಬ್, ವೈಸಿಬಿಸಿ ಬಳ್ಳಾರಿ, ಬಳ್ಳಾರಿಯ ನಂದಿ ಬಾಸ್ಕೆಟ್‌ಬಾಲ್ ಕ್ಲಬ್, ಮಾದನ ಹಿಪ್ಪರ್ಗದ ವಿವೇಕ್ ಆನಂದ್ ಭಾಸ್ಕರ್ ಬಾಸ್ಕೆಟ್‌ಬಾಲ್ ಕ್ಲಬ್, ಬೀದರ್ ನ ಎ.ಬಿ.ಸಿ ಬಾಸ್ಕೆಟ್‌ಬಾಲ್ ಕ್ಲಬ್, ಕಲಬುರಗಿಯ ಕುವೆಂಪು ಬಾಸ್ಕೆಟ್‌ಬಾಲ್ ಕ್ಲಬ್, ಹಮನಾಬಾದ್ ನ ಮಾಣಿಕ್ ಪ್ರಭು ಬಾಸ್ಕೆಟ್‌ಬಾಲ್ ಕ್ಲಬ್ ಭಾಗವಹಿಸಿದ್ದವು.







