ಕಲಬುರಗಿ| ಡಿ.7ರಂದು ಸಜ್ಜನ ಸಿರಿ ಪ್ರಶಸ್ತಿ ಪ್ರದಾನ: ವಿಜಯಕುಮಾರ್ ತೇಗಲತಿಪ್ಪಿ

ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಪತ್ರಕರ್ತ-ಸ್ನೇಹಜೀವಿ ಲಿಂ.ಗುರುಬಸಪ್ಪ ಸಜ್ಜನಶೆಟ್ಟಿ ಹೊನ್ನಕಿರಣಗಿ ಅವರ ಸ್ಮರಣಾರ್ಥ ಡಿ.7ರಂದು ನಗರದ ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರದ ಪ್ರಮುಖರಿಗೆ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಲೇಖಕಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ, ಹಿರಿಯ ಪತ್ರಕರ್ತ ದೇವೇಂದ್ರ ಆವಂಟಿ ಹಾಗೂ ವಿಶೇಷ ಆಹ್ವಾನಿತರಾಗಿ ಜಗದೀಶ ಮರಪಳ್ಳಿ, ಕುಸನೂರ ಗ್ರಾಪಂ ಅಧ್ಯಕ್ಷ ಕುಪೇಂದ್ರ ಬರಗಾಲಿ, ರೇಣುಕಾ ಗುರುಬಸಪ್ಪ ಸಜ್ಜನಶೆಟ್ಟಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಝೀರುದ್ದಿನ್ ಮುತ್ತವಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರಾದ ಕಲಬುರಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ-ಸಾಹಿತಿ ಎಸ್.ಪಿ. ಸುಳ್ಳದ, ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ, ಎನ್.ವಿ. ಪಿಯು ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ಬಸವರಾಜ ಅಂಗಡಿ, ಗಾಯಕ ಮಧುಸೂಧನ ಮಲ್ಲಾಬಾದಿ, ಕೋಟನೂರ ಡಿ ಗ್ರಾಮದ ವಿ.ಎಸ್.ಎಸ್.ಎನ್. ಅಧ್ಯಕ್ಷ ಮಲ್ಲಿನಾಥ ನಾಗನಹಳ್ಳಿ, ಕವಯತ್ರಿ ನೀತಾ ಡಿ ಕಾಬಾ, ಕಾಂಗ್ರೇಸ್ ಯುವ ಅಧ್ಯಕ್ಷ ಶಿವಾನಂದ ಹೊನಗುಂಟಿ, ನ್ಯಾಯವಾದಿ ಸಂತೋಷಕುಮಾರ ರಾಂಪೂರೆ ಅವರಿಗೆ ಸಜ್ಜನ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ವಿಜಯಕುಮಾರ್ ಪಾಟೀಲ್ ಹೇಳಿದರು.







