ಕಲಬುರಗಿ | ಸಂಕಲ್ಪ್ ಇರಿಗೇಷನ್ ಸಿಸ್ಟಮ್ಸ್‌ಗೆ `ಬೆಸ್ಟ್ ಪರಫಾರ್ಮರ್ ಇನ್ ದಿ ಡಿಸ್ಟ್ರಿಕ್ಸ್' ಪ್ರಶಸ್ತಿ ಪ್ರದಾನ

ಕಲಬುರಗಿ : ಬೆಂಗಳೂರಿನಲ್ಲಿ ಈಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶ (ಇನ್ವೆಸ್ಟ್ ಕರ್ನಾಟಕ)ದಲ್ಲಿ ಕಲಬುರಗಿ ಜಿಲ್ಲೆಯಿಂದ ಏಕೈಕ `ಸಂಕಲ್ಪ್ ಇರಿಗೇಷನ್ ಸಿಸ್ಟಮ್ಸ್‌ಗೆ `ಬೆಸ್ಟ್ ಪರಫಾರ್ಮರ್ ಇನ್ ದಿ ಡಿಸ್ಟ್ರಿಕ್ಸ್' ಅವಾರ್ಡ್ ಅನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಬೃಹ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಕೃಷಿ ಸಚಿವ ಚಲುವರಾಯಸ್ವಾಮಿ ಪ್ರದಾನ ಮಾಡಿದರು.
ಸಿಸ್ಟಮ್ಸ್ ಪಾಲುದಾರರಾದ ಶಿವಕುಮಾರ ಜೋಳದಪೆಗ್ಗೆ, ಪ್ರಶಾಂತ ಸಾಹು, ಅಶೋಕ ಬಿರಾದಾರ ಮತ್ತು ಗುರುಪ್ರಸಾದ ಪೂಜಾರಿ ಅವರ ಪರಿಶ್ರಮದ ಫಲವಾಗಿ ನೀರಾವರಿ ಸಂಬಂಧಿತ ಉತ್ತಮ ಕಂಪನಿ ಬಿರುದಾಂಕಿತ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡಿದೆ.
ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕಿ ಸುರೇಖಾ ಮುನ್ನೋಳಿ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಅಬ್ದುಲ್ ಅಜಿಂ ನೆರವಿನಿಂದ ಜಾಗತಿಕ ಮಟ್ಟದ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ ಗುರುತಿಸಿ ಪ್ರಶಸ್ತಿ ದೊರೆಕಿರುವುದು ತುಂಬಾ ಸಂತೋಷ ತಂದಿದೆ ಎಂದು ಪಾಲುದಾರಲ್ಲೊಬ್ಬರಾದ, ನಿವೃತ್ತ ಬ್ಯಾಂಕ್ ಅಧಿಕಾರಿ ಬಾಬುರಾವ ಜೋಳದಪೆಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.





