ಕಲಬುರಗಿ | ಹೆಸರು ಬೆಳೆಯ ಹಳದಿ ಎಲೆ ವೈರಸ್ ರೋಗ ಹತೋಟಿಗೆ ವಿಜ್ಞಾನಿಗಳ ಸಲಹೆ

ಕಲಬುರಗಿ: ಜಿಲ್ಲೆಯ ಕಮಲಾಪುರ ಮತ್ತು ಆಳಂದ ಭಾಗದ ಕೆಲವು ಹಳ್ಳಿಗಳಲ್ಲಿ ಹೆಸರು ಬೆಳೆಯಲ್ಲಿ ಹಳದಿ ರೋಗ ಕಂಡು ಬಂದಿದ್ದು, ಈ ರೋಗ ಹತೋಟಿಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ವಿಜ್ಜಾನ ಕೇಂದ್ರ ಕಲಬುರಗಿ, ಬೀದರ್ ಕೃಷಿ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಹೆಸರು 18 ರಿಂದ 22 ದಿನ ಬೆಳವಣಿಗೆ ಹಂತದಲ್ಲಿ ಅಲ್ಲಲ್ಲಿ ಮಳೆ ಕೊರತೆ ಕಂಡು ಬಂದಿದ್ದು, ರೈತರು ಅಂತರ ಬೇಸಾಯ ಕೈಗೊಳ್ಳಬೇಕು ಹಾಗೂ ಹೊಲದಲ್ಲಿ ಕಳೆ ನಿರ್ಮೂಲನೆ ಅತ್ಯಗತ್ಯ.
ನುಸಿ, ಬಿಳಿ ನೊಣ ಯಲ್ಲೋ ಮೋಸಾಯಿಕ್ ರೋಗವನ್ನು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹರಡಿಸುತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯ ಇರುವ ಬೇವಿನ ಎಣ್ಣೆ 2 ಮೀ ಲಿ ಅಥವಾ ಇಮಿಡಕ್ಲೋಪ್ರಿಡ್ ಅರ್ಧ ಮೀ ಲಿ ಅಥವಾ ಥ್ಯಾಯೋಮೆಥಕ್ಷಂ ಅರ್ಧ ಗ್ರಾಂ ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗ ಪೀಡಿತ ಹಳದಿ ವೈರಸ್ ಗಿಡಗಳನ್ನು ತೆಗೆದು ನಾಶಪಡಿಸಬೇಕು ಎಂದು ತಿಳಿಸಿದ್ದಾರೆ.
Next Story





