ಕಲಬುರಗಿ | ಎಸ್‌ಸಿಪಿ, ಟಿಎಸ್‌ಸಿಪಿ ಹಣ ಜನರಲ್ ಆಗಿ ಬಳಸುವುದಿಲ್ಲ; ಸಚಿವ ಎಚ್.ಸಿ.ಮಹದೇವಪ್ಪ

ಕಲಬುರಗಿ: ಗ್ಯಾರೆಂಟಿ ಯೋಜನೆಗೆ ಎಸ್‌ಸಿಪಿ, ಟಿಎಸ್‌ಸಿಪಿ ಹಣ ಜನರಲ್ ಆಗಿ ಬಳಸೋದಿಲ್ಲ. ಆ ಯೋಜನೆಯಲ್ಲಿ ಬರುವ ಎಸ್ಸಿ ಮತ್ತು ಎಸ್ಟಿ ಜನರಿಗೆ ಆ ಯೋಜನೆ ಹಣ ಬಳಕೆ ಮಾಡಲಾಗುತ್ತೆ. ಅದನ್ನು ಎಲ್ಲರಿಗೂ ಬಳಕೆ ಮಾಡೋದಕ್ಕೆ ಆಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಎಸ್‌ಸಿಪಿ, ಟಿಎಸ್‌ಸಿಪಿ ಹಣ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ವಿಚಾರ ಬಗ್ಗೆ ಮಾತನಾಡಿದ ಅವರು, ಒಂದು ಯೋಜನೆಗೆ ಈಡೀ ಎಸ್‌ಸಿಪಿ, ಟಿಎಸ್‌ಸಿಪಿ ಹಣ ಬಳಸೋದಕ್ಕೆ ಆಗುವುದಿಲ್ಲ. ಬಜೆಟ್ ತಯಾರಿಕೆ ಪೂರ್ವ ಭಾವಿ ಸಭೆಯಲ್ಲಿ ದಲಿತ ಸಂಘಟನೆಗಳನ್ನು ಕರೆದು ನಾನು ಮತ್ತು ಸಿಎಂ ಚರ್ಚೆ ಮಾಡಿದ್ದೆವೆ. ಚರ್ಚೆ ಮಾಡುವಾಗ ಅನೇಕ ಸಲಹೆ ಕೊಟ್ಟಿದ್ದಾರೆ. ಎಸ್‌ಸಿಪಿ, ಟಿಎಸ್‌ಸಿಪಿ ಹಣ ಬಳಕೆ ಮಾಡಿಕೊಂಡು ಹೇಗೆ ಅಭಿವೃದ್ಧಿ ಮಾಡಬೇಕು ಅಂತಾ ಅದಕ್ಕೆ ಅಭಿನಂದನೆಯನ್ನು ಕೂಡ ಸಲ್ಲಿಸಿದ್ದಾರೆ ಎಂದರು.
ದಲಿತ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ದಲಿತ ಸಮಾವೇಶ ನಡೆಯುತ್ತಲೆ ಇರುತ್ತೆ. ಅಪಸ್ವರ ಏನು ಇಲ್ಲ. ಪಕ್ಷದ ವೇದಿಕೆ ಮಾಡುವಾಗ ಎಲ್ಲರ ವಿಶ್ವಾಸ ತೆಗೆದುಕೊಂಡು ಮಾಡಬೇಕು. ಹೈಕಮಾಂಡ್ ಮಾಡಬೇಡಿ ಅಂತಾ ಏನು ಹೇಳಿಲ್ಲ. ಯಾವುದಾದರು ವಿಷಯ ಮಾತಾಡುವಾಗ ಪಕ್ಷಕ್ಕೆ ಮುಜುಗರ ಆಗದಂತೆ ಮಾತಾಡಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ನಾಯಕತ್ವ ಬದಲಾವಣೆ ಆಗುವ ವಿಚಾರ ಇಲ್ಲವೆ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ದೇವರಾಜ್ ಅರಸ್ ಅವರ ಅವಧಿಗಿಂತ ಹೆಚ್ಚಿನ ಅವಧಿ ಸಿಎಂ ಆಗುವ ವಿಚಾರವಾಗಿ ಉತ್ತರಿಸಿದ ಅವರು, ಮುಖ್ಯಮಂತ್ರಿ ಸ್ಥಾನ ಇರೋದೆ ರೇಕಾರ್ಡ್ ಮುರಿಯೋದಕ್ಕೆ. ಅವಕಾಶ ಸಿಕ್ಕಾಗ ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದರು.
ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶವನ್ನು ಕಾನೂನಿನ ಚೌಕಟ್ಟಿನಲ್ಲಿ ಏನಿದೆ ನೋಡಿ ಪರಾಮರ್ಶೆ ಮಾಡಿ ತೀರ್ಮಾನ ಮಾಡುತ್ತೇವೆ. ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲಿ ರಂಜಾನ್ ಸಂದರ್ಭದಲ್ಲಿ ಸರಕಾರಿ ಅವಧಿ ಕಡಿಮೆ ಮಾಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.







