ಕಲಬುರಗಿ | ಶಿಕ್ಷಣ ಉಳಿವಿಗೆ, ಹಾಸ್ಟೆಲ್ ಬಲವರ್ಧನೆಗಾಗಿ ಎಸ್ಎಫ್ಐನಿಂದ ಜಾಥಾ

ಕಲಬುರಗಿ: ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಹಾಗೂ ಹಾಸ್ಟೆಲ್ ಬಲವರ್ಧನೆಗಾಗಿ ಎಸ್ಎಫ್ಐ ಹಮ್ಮಿಕೊಂಡಿರುವ ರಾಜ್ಯಾವ್ಯಾಪಿ ಶೈಕ್ಷಣಿಕ ಜಾಥಾವನ್ನು ಇಲ್ಲಿನ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಮತ್ತು ಅಂಬೇಡ್ಕರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಸ್ವಾಗತಿಸಿದರು.
ಜಾಥಾವನ್ನು ಸ್ವಾಗತಿಸಿದ ಚಿಂತಕ ಪ್ರೊ.ಆರ್.ಕೆ ಹುಡುಗಿ ಮಾತನಾಡಿ, ಎಸ್ಎಫ್ಐನ ಜಾಗೃತಿ ಜಾಥಾ ಶೈಕ್ಷಣಿಕ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿದೆ. ಅಲ್ಲದೆ, ದೀರ್ಘಕಾಲದ ಜಾಗೃತಿಯನ್ನು ವಿದ್ಯಾರ್ಥಿಗಳ ಮಧ್ಯೆ ಬಿತ್ತರಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಮಹತ್ವದ ಜಾಥಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಇದೇ ವೇಳೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಡಾ.ದೊಡ್ಡ ಬಸವರಾಜ್ ಗುಳೇದಾಳ ಹಾಗೂ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್ ಮಾತನಾಡಿದರು. ಚಿಂತಕ ಅರುಣ್ ಕುಮಾರ್ ಜೋಳದಕೂಡ್ಲಿಗಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ, ಜಿಲ್ಲಾ ಅಧ್ಯಕ್ಷರಾದ ಸರ್ವೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪ್ರೇಮ್, ಜಿಲ್ಲಾ ಸಹ ಕಾರ್ಯದರ್ಶಿ ನಾಗಮ್ಮ, ಜಿಲ್ಲಾ ಸಮಿತಿ ಸದಸ್ಯರಾದ ಹುಲಗೆಮ್ಮ, ಮಾಲಾಶ್ರೀ ಸೇರಿದಂತೆ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಲವಿತ್ರ ವಸ್ತ್ರದ್ ಅವರು ಕ್ರಾಂತಿಗೀತೆ ಹಾಡಿದರು. ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.







