Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಶರಣ ಸಾಹಿತ್ಯದಿಂದ ಆಂತರಿಕ...

ಕಲಬುರಗಿ | ಶರಣ ಸಾಹಿತ್ಯದಿಂದ ಆಂತರಿಕ ಸಾಮರ್ಥ್ಯ ಹೆಚ್ಚಳ: ಪ್ರೊ.ವಿಕ್ರಮ ವಿಸಾಜಿ

ವಾರ್ತಾಭಾರತಿವಾರ್ತಾಭಾರತಿ13 Oct 2025 8:25 PM IST
share
ಕಲಬುರಗಿ | ಶರಣ ಸಾಹಿತ್ಯದಿಂದ ಆಂತರಿಕ ಸಾಮರ್ಥ್ಯ ಹೆಚ್ಚಳ: ಪ್ರೊ.ವಿಕ್ರಮ ವಿಸಾಜಿ

ಕಲಬುರಗಿ : ಜಗತ್ತಿನ ಭಾಷೆಗಳಲ್ಲಿಯೇ ವಿಶಿಷ್ಟವಾದ ವಚನ ವಿವೇಕದ ಶರಣ ಸಾಹಿತ್ಯದ ಅಧ್ಯಯನದಿಂದ ನಮ್ಮೊಳಗಿರುವ ಆಂತರಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡೀನ್, ಲೇಖಕ ಪ್ರೊ.ವಿಕ್ರಮ ವಿಸಾಜಿ ಅಭಿಪ್ರಾಯ ಪಟ್ಟರು.

ರಂಗ ಶಿಕ್ಷಕ, ನಿರ್ದೇಶಕ ರಾಘವೇಂದ್ರ ಹಳಿಪೇಟಿ ರಚಿಸಿದ, ರಾಣೆ ಬೆನ್ನೂರಿನ ರಂಗಕುಸುಮ ಪ್ರಕಾಶಣ ಪ್ರಕಟಿಸಿದ ನಮ್ಮೊಳಗೊಬ್ಬ ಶರಣ ನಾಟಕ ಕೃತಿಯ ಪರಿಚಯ ಮಾಡಿಸಿದ ಅವರು, ಬರಹಗಾರರಿಗೆ, ಲೇಖಕರಿಗೆ, ನಾಟಕಕಾರರಿಗೆ ಶರಣ ಸಾಹಿತ್ಯವೆಂದರೆ ಅದ್ಭುತವಾದ ಗಣಿಯಿದ್ದಂತೆ. ತೆಗೆದಷ್ಟೂ ಸಿಗುವ, ಶರಣರ ನಿಷ್ಠುರ ನಿಲುವು, ಮನುಷ್ಯಪ್ರೀತಿ ಎಲ್ಲ ಕಾಲಕ್ಕೂ ಅನ್ವಯವಾಗುವುದರಿಂದ ಶರಣರ ವಿಚಾರಗಳನ್ನು ಸಂರಕ್ಷಿಸುವುದು ಆಧುನಿಕ ಕಾಲದ ಎಲ್ಲ ಲೇಖಕರ ಹೊಣೆಯಾಗಿದೆ ಎಂದರು.

ಈ ದಿಸೆಯಲ್ಲಿ ಮಾದಾರ ಚೆನ್ನಯ್ಯನಂತಹ ಶರಣರ ವಿಷಯವನ್ನು ತೆಗೆದುಕೊಂಡು ನಾಟಕ ರಚಿಸಿದ ರಾಘವೇಂದ್ರ ಅವರ ಸಾಹಸ ಮೆಚ್ಚುವಂತಹದ್ದಾಗಿದೆ ಎಂದರು.

ನಾಟಕ ಕೃತಿಯನ್ನು ಬಿಡುಗಡೆಗೊಳಿಸಿದ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಪ್ರಯೋಗಕ್ಕೂ ಮುನ್ನ ಬರೆದ ನಾಟಕಗಳು ಕೇವಲ ಸಾಹಿತ್ಯ ಕೃತಿಗಳಾಗಿಯೇ ಉಳಿಯುತ್ತವೆ. ರಂಗದ ಮೇಲೆ ತಂದ ನಂತರ ಪ್ರಕಟಿಸಿದರೆ, ಉತ್ತಮ ಕೃತಿಯಾಗುವ ಸಂಭವ ಇರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವಗಂಗಮ್ಮ ರುಮ್ಮಾ ಮಾತನಾಡಿ, ಶರಣ ಚಳುವಳಿಯಲ್ಲಿ ಸ್ವಯಂ ವ್ಯಕ್ತಿತ್ವದ ವಿಕಸನ ಮಾಡಿಕೊಳ್ಳುವುದರ ಜೊತೆಗೆ ಇದುರಿನ ವ್ಯಕ್ತಿತ್ವಗಳಿಗೆ ಗೌರವ ಕೊಡುವ ಮೂಲಕ ಹೋರಾಟಗಳನ್ನು ಹೇಗೆ ಕಾಪಾಡಬಹುದು ಎಂಬುದನ್ನು ನಾಟಕಕಾರ ರಾಘವೇಂದ್ರ ಅವರು ತಮ್ಮ ಈ ಕೃತಿಯಲ್ಲಿ ಸೂಚಿಸಿದ್ದಾರೆ. ಜಾಗತಿಕ ಚರಿತ್ರೆಯಲ್ಲಿ ದಾಖಲಾದ ಅಪೂರ್ವ ಘಟನೆಯನ್ನು ಸೀಮಿತ ಅವಧಿಯೊಳಗೆ ಚಿತ್ರಿಸುವುದು ಸಾವಾಲಿನ ಕೆಲಸವಾಗಿದ್ದು, ಅದರಲ್ಲಿ ನಾಟಕಕಾರರು ಯಶಸ್ವಿಯಾಗಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯ್ಕ ದೊರೆ, ಪ್ರಕಾಶಕರಾದ ವೆಂಕಟೇಶ ಈಡಿಗರ, ನಾಟಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ.ಮಲ್ಲೇಶ ಪಾವಗಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಸಂದೀಪ ಮಾಳಗಿ ಉಪಸ್ಥಿತರಿದ್ದರು.

ನಾಟಕಕಾರ ರಾಘವೇಂದ್ರ ಹಳಿಪೇಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತುಳಸಾಬಾಯಿ ಹಳಿಪೇಟಿ, ರೇಖಾ ರಾಘವೇಂದ್ರ, ವಿಶಾಲ ಪಾಟೀಲ, ಡಾ.ವಿಶ್ವರಾಜ ಪಾಟೀಲ, ಶಂಕ್ರಯ್ಯ ಘಂಟಿ, ಹುಲುಗಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಹಳಿಪೇಟಿ, ಶಿವಕುಮಾರ ಹಳಿಪೇಟಿ, ಸಂತೋಷ ಹಳಿಪೇಟಿ, ಲಕ್ಷ್ಮಿಬಾಯಿ, ರಾಧಾಬಾಯಿ, ರಮೇಶ ಹಳಿಪೇಟಿ, ಶಾಂತಲಿಂಗಯ್ಯ ಮಠಪತಿ, ಬಸವಪ್ರಭು, ಡಾ.ಕೆ.ಲಿಂಗಣ್ಣ, ಅಶೋಕ ತೊಟ್ನಳ್ಳಿ, ಶ್ರೀಶೈಲ ಘೂಳಿ, ವಿಶ್ವನಾಥ ಭಕ್ರೆ, ಮಲ್ಲಿಕಾರ್ಜುನದೊಡ್ಡಮನಿ, ವಿಜಯಲಕ್ಷ್ಮಿ ದೊಡ್ಡಮನಿ, ನಾಗರಾಜ ಸಾಲೋಳ್ಳಿ ಇದ್ದರು, ಆರ್‍ಜೆ ವಾಣಿ ನಿರೂಪಿಸಿದರು. ಡಾ.ಸಂದೀಪ ಮಳಗಿ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X