ಕಲಬುರಗಿ | ಶೋಭಾರಾಣಿ ಡಿ.ಅಗರವಾಲಗೆ ʼಆದರ್ಶ ಮಾತಾ ಪ್ರಶಸ್ತಿʼ ಪ್ರದಾನ

ಕಲಬುರಗಿ: ಹೈದರಾಬಾದ್ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭಾರಾಣಿ ಡಿ.ಅಗರವಾಲ ಅವರಿಗೆ ʼಆದರ್ಶ ಮಾತಾ ಪ್ರಶಸ್ತಿʼ ಪ್ರದಾನ ಮಾಡಲಾಯಿತು.
ಸತತ 20 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅಲ್ಲದೆ ಶ್ರೀ ಅಂಬುಬಾಯಿ ಅಂಧ ಬಾಲಕಿಯರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನಿರಂತರ ನೀಡುತ್ತಿರುವುದು ಗಮನಿಸಿ, ಈ ಪ್ರಶಸ್ತಿ ನೀಡಲಾಗಿದೆ.
ಮಹಾರಾಷ್ಟ್ರದ ಪುಣೆ ನಗರದ ಶ್ರೀ ಮಾತೋಶ್ರೀ ಮಾಹೀ ಸಾಹೇಬ್ ಮೆಮೊರಿಯಲ್ ಟ್ರಸ್ಟಿಗಳಾದ ಆರತಿ ವಿ.ಪಾರ್ಕೆ ಮತ್ತು ವಿನಾಯಕ ಪಾರ್ಕೆ ಅವರು ಈ "ಆದರ್ಶ ಮಾತಾ ಪ್ರಶಸ್ತಿ"ಯನ್ನು ನೀಡಿ ಗೌರವಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಅಗರವಾಲ ಅಧ್ಯಕ್ಷತೆ ವಹಿಸಿದ್ದರು. ಸಂಘದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಹಾದೇವಿ ಗರೂರ, ಸದಸ್ಯರಾದ ಲಕ್ಷ್ಮಣ್ ಮೆಂಗಜಿ, ಶಾಲೆ ಮುಖ್ಯೋಪಾಧ್ಯಾಯರಾದ ಸಂಗೀತಾ ಡಿ.ಠಾಕೂರ್, ಶಿಕ್ಷಕಿಯರಾದ ಕನ್ಯಾರಾಣಿ, ಉಷಾರಾಣಿ, ಭಾರತಿ ದಾಸನಕೊಪ್ಪ, ವಿದ್ಯಾವತಿ, ಸಂಗೀತ ಶಿಕ್ಷಕರಾದ ಮಹೇಶ ಕಲಾಲ, ವೈಜನಾಥ ನೀಲಿ, ಗೃಹ ಪಾಲಕಿಯರಾದ ಶಾಂಭವಿ, ಶರಣಮ್ಮ, ಅನ್ನಪೂರ್ಣ, ಜೀವಿಕಾ, ದ್ವಿತೀಯ ದರ್ಜೆ ಸಹಾಯಕಿ ವಿಜಯಾ, ಪ್ರಸಾದ್, ಸಿದ್ದು ಯಳಸಂಗಿ, ಪರಮಾನಂದ, ಅಡುಗೆ ಸಹಾಯಕರಾದ ಅಂಬಿಕಾ, ಸವಿತಾ, ಸುಮಿತ್ರಾ, ಕಾಳಮ್ಮ, ಸುಮಿತ್ರಾ ಪಿ., ಸವಿತಾ, ಜಗದೇವಿ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.







