ಕಲಬುರಗಿ | ಬಸವಣ್ಣನವರ ಕುರಿತ ನಾಟಕಗಳು ಮಕ್ಕಳಿಗೆ ತೋರಿಸಿ : ಡಾ.ಕೆ.ಲಿಂಗಪ್ಪ

ಕಲಬುರಗಿ : ಕಲ್ಯಾಣ ಕರ್ನಾಟಕದಲ್ಲಿ ಬಸವಣ್ಣ, ಮತ್ತಿತರ ಶರಣರ ಕುರಿತು ನಾಟಕಗಳನ್ನು ಶಾಲಾ ಮಕ್ಕಳಿಗೆ ತೋರಿಸಿದರೆ, ಅವರು ಅಭಿರುಚಿ ಪಡೆಯುತ್ತಾರೆ ಎಂದು ಕಲಬುರಗಿ ರಂಗ ಸಂಘಟಕ ಡಾ.ಕೆ.ಲಿಂಗಪ್ಪ ಅವರು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ರಂಗಾಯಣ ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಮೂರು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ರಂಗಕರ್ಮಿಗಳು ರಂಗಾಸಕ್ತರು ಮೂರು ದಿನಗಳ ನಡೆದ ನಾಟಕದಲ್ಲಿ ಎಲ್ಲರೂ ಸಹಕರಿಸಿ ಒಳ್ಳೆಯ ವಾತಾವರಣ ಸೃಷ್ಠಿಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸುವುದಕ್ಕಾಗಿ ಧನ್ಯವಾದ ಸಲ್ಲಿಸಿದರು. ಮೋಳಿಗೆ ಮಾರಯ್ಯ ನಾಟಕ ನೋಡಲು ಬಹಳಷ್ಟು ಮಂದಿ ಬಂದಿರುವುದು ಸಂತಸವಾಯಿತು ಎಂದರು.
ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕ ಸುಜಾತಾ ಜಂಗಮಶೆಟ್ಟಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್, ಕರ್ನಾಟಕ ನಾಟಕ ಅಕಾಡೆಮಿ ಶಿವನಾಯಕ ಕೊರೆ, ರಂಗಾಯಣ ಉಪನಿರ್ದೇಶಕ ಜಗದೀಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಲಬುರಗಿ ಸಂಚಾಲಕ ಡಾ. ವಿಶ್ವರಾಜ್ ಪಾಟೀಲ್, ವೀರಶೈವ ಲಿಂಗಾಯತ್ ಸದಸ್ಯರಾದ ರವೀಂದ್ರ ಶಾಬಾದಿ ಸೇರಿದಂತೆ ಅನೇಕರು ಹಾಜರಿದ್ದರು.







