ಕಲಬುರಗಿ | ಸ್ಲಂ ಜನಾಂದೋಲನ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ: ಸ್ಲಂ ಜನಾಂದೋಲನ ಜಿಲ್ಲಾ ಘಟಕ ಹಾಗೂ ಸಂವಿಧಾನ ಸಾಥಿ ಸಂಯುಕ್ತ ಆಶ್ರಯದ ವತಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಲಂ ಕಲಿಕಾ ಕೇಂದ್ರಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೋಟ್ ಬುಕ್ ವಿತರಣೆ ಮಾಡಲಾಯಿತು.
ಶನಿವಾರ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಗೋದುತಾಯಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪುಟ್ಟಮನಿ, ದೇವಿದಾಸ್ ಚಾಲನೆ ನೀಡಿದರು.
ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಸರಡಗಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ಲಂ ಜನರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಕಲಿಕಾ ಕೇಂದ್ರಗಳ ಸ್ಥಾಪನೆ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಲಂ ಕಲಿಕಾ ಕೇಂದ್ರದ ಶಿಕ್ಷಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸ್ಲಂ ಜನಾಂದೋಲನ ಜಿಲ್ಲಾ ಅಧ್ಯಕ್ಷ ಗೌರಮ್ಮ ಮಾಕಾ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ ಜನಾರ್ಧನ್ ಅಳ್ಳಿಬೆಂಚಿ, ಸಂವಿಧಾನ ಸಾಥಿ ಸಂಯೋಜಕರಾದ ಖಲೀಫ್ ಬೆಳ್ತಂಗಡಿ, ಸೋಮಶೇಖರ್ ಬಳಮಗಿ, ಭರತ್ ಡಿಂಗ್ರಿ ಮತ್ತು ಮರಿಯಮ್ಮಾ ಕ್ರಾಂತಿ ಗೀತೆ ಹಾಡಿದ್ದರು. ಸೇವಾ ಸಂಸ್ಥೆಯ ನಿರ್ದೇಶಕರಾದ ಫಾದರ್ ವಿಕ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.





