ಕಲಬುರಗಿ | ಸ್ಪೇಸ್ ಜಾಗೃತಿ ದಿನ: ಹೆಸರು ನೋಂದಣಿಗೆ ಸೂಚನೆ
ಕಲಬುರಗಿ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಪ್ರೋ.ಯು.ಆರ್ ರಾವ್ ರವರು ಹಾಗೂ ಮತ್ತೊಬ್ಬ ಖ್ಯಾತ ವಿಜ್ಞಾನಿ ಯು.ಆರ್. ರಾವ್ ಸೆಟ್ಲೈಟ್ ಸೆಂಟರ್ ಆಂಡ್ ಐಎಸ್ಟಿಆರ್ಎಸಿ ((U.R. Rao Satellite Centre & ISTRAC)) ಸಂಸ್ಥೆಯ ನಿರ್ದೇಶಕರು ಹಾಗೂ ಅಕಾಡೆಮಿಯ ಮಾಜಿ ಅಧ್ಯಕ್ಷರು ಪದ್ಮಶ್ರೀ ಪುರಸ್ಕೃತರಾದ ಡಾ.ಎಸ್.ಕೆ.ಶಿವಕುಮಾರ್ ರವರ ಜನ್ಮ ದಿನದ ವಾರ್ಷಿಕೋತ್ಸವದ ಅಂಗವಾಗಿ ಸ್ಪೇಸ್ ಜಾಗೃತಿ ದಿನ ((SPACE AWARENESS DAY)) ಕಾರ್ಯಕ್ರಮವನ್ನು ಇದೇ ಮಾ.15 ರಂದು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯು.ಆರ್.ರಾವ್ ಸೆಟ್ಲೈಟ್ ಸೆಂಟರಿನ ಉಪನಿರ್ದೇಶಕ ಡಾ.ಆರ್.ವಿ.ನಾಡಗೌಡ ಮತ್ತು ಐ.ಎಸ್.ಟಿ.ಆರ್.ಎ.ಸಿ. ಸಂಸ್ಥೆಯ ಹಿರಿಯ ವಿಜ್ಞಾನಿ ಶ್ರೀನಾಥ ರತ್ನಕುಮಾರ್ ಅವರು ತಾಂತ್ರಿಕ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪದವಿ, ಸ್ನಾತಕೋತ್ತರ ಪದವಿ, ವಿಜ್ಞಾನ, ಇಂಜನಿಯರಿಂಗ್ ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರು ಹಾಗೂ ಆಸಕ್ತಿಯುಳ್ಳ ಜನಸಾಮಾನ್ಯರು ಭಾಗವಹಿಸಬಹುದಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು 2025ರ ಮಾ.14 ರೊಳಗಾಗಿ ಗೂಗಲ್ ಫಾರ್ಮ್ ಮೂಲಕ REGISTER HERE: https://forms.gle/KAhKfog3sUZJowpx5 ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ 9845258894, 9743084194 ಗಳಿಗೆ ಹಾಗೂ ಅಕಾಡೆಮಿಯ REGISTER HERE: https://forms.gle/KAhKfog3sUZJowpx5 ವೆಬ್ ಸೈಟ್ ಅನ್ನು ಸಂಪರ್ಕಿಸಲು ಕೋರಲಾಗಿದೆ.