ಕಲಬುರಗಿ | ಜೂ.10 ರಿಂದ ʼಕನ್ನಡೋತ್ಸವʼ ವಿಶೇಷ ಕಾರ್ಯಕ್ರಮ

ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕನ್ನಡ ನಾಡು-ನುಡಿಯ ಕಲೆ ಕಲರವ ಬಿಂಬಿಸುವ ಕನ್ನಡೋತ್ಸವ ಎಂಬ ವಿಶೇಷ ಕಾರ್ಯಕ್ರಮವನ್ನು ಜೂ.10 ರಿಂದ ಎರಡು ದಿನಗಳ ಕಾಲ ನಗರದ ಕನ್ನಡ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ತಿಳಿಸಿದ್ದಾರೆ.
ಈ ಕುರಿತು ನಗರದ ಕನ್ನಡ ಭವನದಲ್ಲಿ ನಡೆದ ಉತ್ಸವ ಸಮಿತಿಯ ಪದಾಧಿಕಾರಿಗಳ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ ಉಳಿಸಿ ಬೆಳೆಸುವ ಜತೆಗೆ ಸಾಂಸ್ಕೃತಿಕ ಶ್ರೀಮಂತಿಕೆಗೆ ಉತ್ತಮ ಕೊಡುಗೆ ನೀಡುತ್ತಾ ಬರುತ್ತಿದೆ. ಕಳೆದ ಮೂರು ವರ್ಷಗಳಿಂದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹತ್ತು ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಈ ಮೂಲಕ ಕಲಬುರಗಿ ಜಿಲ್ಲೆ ಸಾಂಸ್ಕೃತಿಕ ಜಿಲ್ಲೆಯನ್ನಾಗಿಸಲು ನಿರಂತರ ಕನ್ನಡಮಯ ಚಟುವಟಿಕೆಗಳು ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ವಿವರಿಸಿದರು.
ಪ್ರಥಮ ಬಾರಿಗೆ ಅನೇಕ ಸಮ್ಮೇಳನಗಳು ಮಾಡಿದ್ದು, ಪರಿಷತ್ತಿನ ಹೆಗ್ಗಳಿಕೆಗೆ ಕನ್ನಡಿಯಾಗಿವೆ. ಐತಿಹಾಸಿಕ ಪರಂಪರೆ ಮತ್ತು ಸಾಹಿತ್ಯ-ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪ್ರಾಮಾಣಿಕ ಕಾರ್ಯಗಳು ಇಲ್ಲಿಯ ಕನ್ನಡ ಭವನದ ಅಂಗಳದಲ್ಲಿ ನಡೆದಿವೆ ಎಂದರು.
ಉತ್ಸವ ಸಮಿತಿಯ ಕಲ್ಯಾಣಕುಮಾರ ಶೀಲವಂತ, ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ್ ಛಪ್ಪರಬಂದಿ, ಧರ್ಮರಜ ಜವಳಿ, ಸಿದ್ದಲಿಂಗ ಬಾಳಿ, ಸೈಯದ್ ನಜೀರುದ್ದೀನ್ ಮುತ್ತವಲಿ, ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಶಕುಂತಲಾ ಪಾಟೀಲ ಜಾವಳಿ, ಪ್ರಮುಖರಾದ ನವಾಬ ಖಾನ್, ಎಂ.ಎನ್. ಸುಗಂಧಿ, ರಾಜೇಂದ್ರ ಮಾಡಬೂಳ, ಸಂತೋಷ ಕುಡಳ್ಳಿ, ಡಾ. ರೆಹಮಾನ್ ಪಟೇಲ್, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ದಿನೇಶ ಮದಕರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ್, ರಮೇಶ ಡಿ ಬಡಿಗೇರ, ಸಂದೀಪ ಭರಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







