ಕಲಬುರಗಿ: ಹೊಸ ವರ್ಷದ ಪ್ರಯುಕ್ತ ಮುಂಬೈ– ಹೈದರಾಬಾದ್ ನಡುವೆ ವಿಶೇಷ ರೈಲು ಸಂಚಾರ

ಸಾಂದರ್ಭಿಕ ಚಿತ್ರ (AI)
ಕಲಬುರಗಿ: ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು ಡಿ. 28 ಮತ್ತು 29 ರಂದು ಮುಂಬೈ ಮತ್ತು ಹೈದರಾಬಾದ್ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಮಧ್ಯ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಟಿಟಿ ಮುಂಬೈ–ಹೈದರಾಬಾದ್: ರೈಲು ಸಂಖ್ಯೆ 07458 ಹೈದರಾಬಾದ್–ಎಲ್ಟಿಟಿ ಮುಂಬೈ ಡಿ. 28 ರಂದು ಭಾನುವಾರ ಸಂಜೆ 5.30ಕ್ಕೆ ಹೈದರಾಬಾದ್ನಿಂದ ಹೊರಟು, ಮರುದಿನ ಬೆಳಗ್ಗೆ 10.40 ಗಂಟೆಗೆ ಎಲ್ಟಿಟಿ ಮುಂಬೈ ತಲುಪಲಿದೆ. ಎಲ್ಟಿಟಿ 07459 ಮುಂಬೈ–ಹೈದರಾಬಾದ್ ವಿಶೇಷ ರೈಲು ಸೋಮವಾರ 29 ರಂದು ಮಧ್ಯಾಹ್ನ 3.20 ಗಂಟೆಗೆ ಎಲ್ಟಿಟಿ ಮುಂಬೈಯಿಂದ ಹೊರಟು, ಮರುದಿನ ಬೆಳಗ್ಗೆ 9.00 ಗಂಟೆಗೆ ಹೈದರಾಬಾದ್ ತಲುಪಲಿದ್ದು, ಬೇಗಂಪೇಟೆ, ಲಿಂಗಂಪಳ್ಳಿ, ವಿಕಾರಾಬಾದ್, ತಂಡೂರು, ವಾಡಿ, ಕಲಬುರಗಿ, ಸೋಲಾಪುರ, ಕಲ್ಯಾಣ ಹಾಗೂ ಪುಣೆ ನಿಲ್ದಾಣಗಳಿಗೆ ತಲುಪಲಿದೆ ಎಂದು ತಿಳಿಸಲಾಗಿದೆ.
ಟಿಕೆಟ್ ಬುಕ್ಕಿಂಗ್: ಹೊಸ ವರ್ಷದ ಪ್ರಯುಕ್ತ ವಿಶೇಷ ಶುಲ್ಕದೊಂದಿಗೆ ಈ ವಿಶೇಷ ರೈಲುಗಳ ಟಿಕೆಟ್ಗಳನ್ನು ಎಲ್ಲಾ ಕಂಪ್ಯೂಟರೈಸ್ಡ್ ಕಾಯ್ದಿರಿಕೆ ಕೇಂದ್ರಗಳು ಹಾಗೂ www.irctc.co.in ವೆಬ್ಸೈಟ್ ನಲ್ಲಿ ಪಡೆಯಬಹುದು. (Unreserved) ಕೋಚ್ಗಳ ಟಿಕೆಟ್ಗಳನ್ನು ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕೌಂಟರ್ ಗಳು ಮತ್ತು UTS ಆಪ್ ಮೂಲಕ ಪಡೆಯಬಹುದಾಗಿದ್ದು, ಪ್ರಯಾಣಿಕರು ಟಿಕೆಟ್ಗಳೊಂದಿಗೆ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.





