ಕಲಬುರಗಿ | ಜಿಲ್ಲಾ ಕ್ರೀಡಾಂಗಣಕ್ಕೆ ಕ್ರೀಡಾ ಇಲಾಖೆ ಆಯುಕ್ತ ಆರ್.ಚೇತನ್ ಭೇಟಿ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಆರ್.ಚೇತನ್ ಅವರು ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಕ್ರೀಡಾಂಗಣದಲ್ಲಿರುವ ವಿದ್ಯಾರ್ಥಿಗಳ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ನಂತರ ಕ್ರೀಡಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ತೆರಳಿ ಸ್ಥಳಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ತರಬೇತುದಾರರಾದ ಸಂಜಯ ಬಾಣದ್, ರಾಜ ಬಾಬು ಚೌಹಾನ್, ಪ್ರವೀಣಕುಮಾರ ಪುಣೆ, ಸಂಗಮೇಶ್ ಕೊಂಬಿನ, ಸ್ಟೀವನ್ ಸ್ವಾಗತ, ಅಶೋಕ್ ಎಂ. ಹಾಗೂ ಇಲಾಖೆಯ ಸಿಬ್ಬಂದಿಯರು ಇದ್ದರು.
Next Story





