ಕಲಬುರಗಿ ಸ್ಪೋರ್ಟ್ಸ್ ಹಬ್ಬ; ಈಜು ಸ್ಪರ್ಧೆಗೆ ಜಿಲ್ಲಾಧಿಕಾರಿ ಚಾಲನೆ

ಕಲಬುರಗಿ; ಕಲಬುರಗಿ ಸ್ಪೋರ್ಟ್ಸ್ ಹಬ್ಬ ಅಂಗವಾಗಿ ಶುಕ್ರವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಈಜುಕೊಳದಲ್ಲಿ ಆಯೋಜಿಸಿದ ಈಜು ಸ್ಪರ್ಧೆಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಚಾಲನೆ ನೀಡಿದರು.
ನಂತರ ಅಂತರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ ವಿವಿಧ ವಿಭಾಗದ ಈಜು ಸ್ಪರ್ಧೆಗಳು ನಡೆದವು. ಕಲಬುರಗಿಯ ಸುಮಾರು 100 ಜನ ಸ್ಥಳೀಯ ಈಜುಗಾರರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ಮಹಾನಗರ ಪಾಲಿಕೆಯ ಆಯುಕ್ತ ಪಿ.ಶ್ರವಣಕುಮಾರ್, ಸಹಾಯಕ ಆಯುಕ್ತೆ ರಿತಿಕಾ ವರ್ಮಾ, ಕ್ರೀಡಾ ಹಬ್ಬ ನೋಡಲ್ ಅಧಿಕಾರಿ ಸಂಗಮೇಶ, ಅಕ್ವಾ ಅಸೋಸಿಯೇಷನ್ ಸಂಸ್ಥೆಯ ಭರತ್ ಭೂಷಣ್, ಸ್ಪ್ರೆನ್ಜೋ ಸಂಸ್ಥೆಯ ಪ್ರವೃತ್, ಕರ್ನಾಟಕ ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಸುಂದರೇಶ, ಸ್ಥಳೀಯ ಕೋಚ್ ಗಳಾದ ಮಚೇಂದ್ರ ಠಾಕೂರ, ರೇಣುಕಾ ಬಿರಾದಾರ, ಬಾಸ್ಕೆಟ್ ಬಾಲ್ ಕೋಚ್ ಪ್ರವೀಣ ಪುಣೆ ಇದ್ದರು.
Next Story




