ಕಲಬುರಗಿ | ಎಸೆಸೆಲ್ಸಿ ಪರೀಕ್ಷೆ : 5 ವಿದ್ಯಾರ್ಥಿನಿಯರಿಗೆ 625ರಲ್ಲಿ 621 ಅಂಕ

ಕಲಬುರಗಿ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಿಲ್ಲೆಯ 5 ರ್‍ಯಾಂಕ್‌ಗಳನ್ನು ವಿದ್ಯಾರ್ಥಿನಿಯರು ಪಡೆದುಕೊಂಡಿದ್ದಾರೆ.
ನಗರದ ಶರಣಬಸವೇಶ್ವರ ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ, ಅದೇ ಶಾಲೆಯ ಪೂರ್ವಷಾ ಕೆ.ಮಾಲಿಪಾಟೀಲ್, ಚಿಂಚೋಳಿ ತಾಲೂಕಿನ ವೀರೇಂದ್ರ ಪಾಟೀಲ್ ಪಬ್ಲಿಕ್ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ರಾಗಿಣಿ, ಮಹಾಗಾವ್ ಕ್ರಾಸ್ ನ ಮೌಂಟ್ ವೆವ್ ಆಂಗ್ಲ ಶಾಲೆಯ ಸೌಮ್ಯ, ಶ್ರೀ ಬಸವ ಗುರುಕುಲ ಶಾಲೆಯ ಮಹಾಲಕ್ಷ್ಮಿ ಎಂಬ ವಿದ್ಯಾರ್ಥಿನಿಯರು ಜಿಲ್ಲೆಯ ಮೊದಲ ರ್‍ಯಾಂಕ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪ್ರಥಮ ಸ್ಥಾನ ಹಂಚಿಕೊಂಡ ಐದು ವಿದ್ಯಾರ್ಥಿನಿಯರು 625ಕ್ಕೆ 621 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ತಾಲೂಕಾವಾರು ಅಂಕಿ ಅಂಶಗಳು :
ಅಫಜಲಪುರ ತಾಲೂಕಿನಲ್ಲಿ ಒಟ್ಟು 3,673 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,310(ಶೇ.35.80) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆಳಂದ ತಾಲೂಕಿನಲ್ಲಿ ಒಟ್ಟು 4,826 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, 1,936 (ಶೇ.40.37) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಚಿಂಚೋಳಿಯಲ್ಲಿ ಒಟ್ಟು 2,755 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 949 (ಶೇ.33.94) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 5,502 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,249 (ಶೇ.40.53) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಬುರಗಿ ಉತ್ತರದಲ್ಲಿ ಒಟ್ಟು 9,052 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 3,849 (ಶೇ.42.17) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಬುರಗಿ ದಕ್ಷಿಣದಲ್ಲಿ ಒಟ್ಟು 6,248 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,420 (ಶೇ.54.61) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜೇವರ್ಗಿ ತಾಲೂಕಿನಲ್ಲಿ ಒಟ್ಟು 4,484 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,788 (ಶೇ.39.88) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸೇಡಂ ತಾಲೂಕಿನಲ್ಲಿ ಒಟ್ಟು 2,723 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 1,159 (ಶೇ.42.13) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ನಗರ ಪ್ರದೇಶದಲ್ಲಿ ಶೇ.46.42ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.39.28ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಸರಕಾರಿ ಶಾಲೆ ಶೇ.53.43, ಅನುದಾನಿತ ಶಾಲೆ ಶೇ.43.95 ಹಾಗೂ ಅನುದಾನರಹಿತ ಶಾಲೆ ಶೇ.72.52 ರಷ್ಟು ಫಲಿತಾಂಶ ಪಡೆದಿವೆ.







