ಕಲಬುರಗಿ | ಬೀದಿ ನಾಯಿಗಳ ದಾಳಿ : ಬಾಲಕಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ಕಲಬುರಗಿ : ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಮೂರು ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಿಲ್ಲತ್ ನಗರದ ಖಂಡಾಲಾ ಗ್ರೌಂಡ್ ಸಮೀಪ ರವಿವಾರ ಸಂಜೆ ನಡೆದಿದೆ.
ಮಿಲ್ಲತ್ ನಗರದ ನಿವಾಸಿ ವಾಹೀದ್ ಖುರೇಷಿ ಎಂಬವರ 3 ವರ್ಷದ ಮಗಳು ನಿದಾ ಫಾತಿಮಾ ಗಂಭೀರ ಗಾಯಗೊಂಡಿರುವುದು ತಿಳಿದು ಬಂದಿದೆ.
ಬಾಲಕಿ ಸಂಜೆ ಮನೆಯಿಂದ ಹೊರಗಡೆ ಹೋಗುತ್ತಿದ್ದಂತೆ ಮೂರು ನಾಯಿಗಳು ಬಾಲಕಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ್ ಶಿಂಧೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೀಡಿಸಿದ್ದಾರೆ.
Next Story





