ಕಲಬುರಗಿ: ಕರಾಟೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯ ಗಾಬರೆ ಲೇಔಟ್‌ನ ಕರಾಟೆ ಟ್ರೈನಿಂಗ್ ಸೆಂಟರ್ ಡೋಜೋದಲ್ಲಿ ಕಲ್ರಿ-ಎನ್-ರಿಯು ಅಕಾಡೆಮಿ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಬ್ಲಾಕ್ ಬೆಲ್ಟ್ ಹಾಗೂ ಕಲರ್ ಬೆಲ್ಟ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನಿಂದ ಆಗಮಿಸಿದ್ದ ರೆಡ್ ಬೆಲ್ಟ್ ಗ್ರ್ಯಾಂಡ್ ಮಾಸ್ಟರ್ ಶ್ರೀನಿವಾಸ್ ಅವರು ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ, ಇಬ್ಬರು ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಹಾಗೂ ಹಲವು ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಮತ್ತು ಕ್ಯಾಂಪ್ ಪ್ರಮಾಣಪತ್ರಗಳನ್ನು ವಿತರಿಸಿದರು. ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಸ್ತನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಸಂಗೀತಾ ಎ. ಪಾಟೀಲ್, ಅಕಾಡೆಮಿಕ್ ಡೈರೆಕ್ಟರ್, ಸರ್ವಜ್ಞ ಚಿನ್ನರ ಲೋಕ ಇಂಗ್ಲಿಷ್ ಮೀಡಿಯಂ ಸ್ಕೂಲ್, ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ. ಚೌಹಾಣ್, ಶ್ರೀಕಾಂತ್ ಪಿಸಾಲ್, ಪ್ರತಾಪ್ ಸಿಂಗ್ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಹಾಗೂ ಪೋಷಕರು ಉಪಸ್ಥಿತರಿದ್ದರು.




