ಕಲಬುರಗಿ | ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು : ಬಿ.ಎಚ್.ನಿರಗುಡಿ

ಕಲಬುರಗಿ : ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ನೋಡಿದ ತಕ್ಷಣ ಗೊಂದಲಗೊಂಡು ಗಾಬರಿಯಾಗುವುದು ಬೇಡ ಇದರಿಂದ ತಲೆಯಲ್ಲಿ ಇರುವ ಜ್ಞಾನವು ಮರೆಯಾಗಿ ಬಿಡುತ್ತದೆ ಎಂದು ಸತ್ಯಂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಕನ್ನಡ ಸಾಹಿತಿ ಬಿ.ಎಚ್ ನಿರಗುಡಿ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಾಲಕಿಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸಾವಧಾನವಾಗಿ ಸಮಚಿತ್ತದಿಂದ ಸರಿಯಾಗಿ ಸೂಚನೆಗಳನ್ನು ಪಾಲಿಸಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸಿದರೆ ನೀವು ಓದಿಕೊಂಡಿರುವ ವಿಷಯಗಳೆಲ್ಲ ನೆನಪಿಗೆ ಬಂದು ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದರು.
ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಬಸವರಾಜ ಬಿರಾಜದಾರ ಮಾತನಾಡಿದರು.
ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಉಪನ್ಯಾಸಕರಾದ ಸವಿತಾ ಪಾಟೀಲ್, ವಿಜಯಲಕ್ಷ್ಮಿ ಪಿ., ಶಿಲ್ಪಾ ಆರ್, ವೈಷ್ಣವಿ ಎನ್., ಅನೂಸೂಯಾ ಜೀ., ಶಿಲ್ಪಕಲಾ, ಶುಭಾ ಆರ್, ಪ್ರೀತಿ ಎಸ್., ಅಶೋಕ್ ಜಿ., ರಾಜೇಶ್ವರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಉಷಾದೇವಿ ಪಾಟೀಲ್ ಸ್ವಾಗತಿಸಿದರು. ಜೈಬಾ ಅಕ್ತರ್, ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.







