ಕಲಬುರಗಿ | ಜೇವರ್ಗಿಯ ಅನಧಿಕೃತ ಆಸ್ಪತ್ರೆ, ಕ್ಲಿನಿಕ್‍ಗಳ ಮೇಲೆ ದಿಢೀರ್ ದಾಳಿ : ಹಲವರಿಗೆ ನೋಟಿಸ್

ಕಲಬುರಗಿ : ಜೇವರ್ಗಿ ತಾಲ್ಲೂಕಿನಲ್ಲಿ ಹಾಗೂ ಪಟ್ಟಣದಲ್ಲಿರುವ ಅನಧಿಕೃತ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ಮೇಲೆ ತಾಲ್ಲೂಕು ಮಟ್ಟದ ಅಧಿಕಾರಿಗಳು ದಿಢೀರ್ ದಾಳಿಯನ್ನು ಮಂಗಳವಾರ ಮಾಡಿದರು.
ತಹಶೀಲ್ದಾರ್ ಮಲ್ಲಣ್ಣ ಯಲಗೋಡ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥ್ ಪಾಟೀಲ್, ಪಿಎಸ್‍ಐ ಗಜಾನನ್ ಬಿರಾದಾರ್, ಕ್ರೈಂ ಪಿಎಸ್‍ಐ ಜ್ಯೋತಿ, ಕಂದಾಯ ನಿರೀಕ್ಷಕ ಗೌಡಪ್ಪಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡರು.
ವಿಜಯಪುರ ಕ್ರಾಸ್ ಸೇರಿದಂತೆ ಮೂರ್ನಾಲ್ಕು ಕ್ಲಿನಿಕ್‍ಗಳಲ್ಲಿ ಪರವಾನಿಗೆ ಪತ್ರ ಸೇರಿದಂತೆ ಅಗತ್ಯ ದಾಖಲೆಗಳ ಕುರಿತು ಪರಿಶೀಲಿಸಿದರು. ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇದ್ದುದರಿಂದ ನೋಟಿಸ್ ಜಾರಿ ಮಾಡಿ ಅಂತಹ ಕ್ಲಿನಿಕ್‍ಗಳನ್ನು ಮುಚ್ಚಿದರು.
ಹಿರಿಯ ಅಧಿಕಾರಿಗಳು ಕ್ಲಿನಿಕ್‍ಗಳ ಮೇಲೆ ಕಾರ್ಯಾಚರಣೆ ಕೈಗೊಂಡಿರುವ ಕುರಿತು ತಮ್ಮ ತಮ್ಮ ಮೊಬೈಲ್ ಹಾಗೂ ವಾಟ್ಸಪ್ ಮೂಲಕ ಮಾಹಿತಿ ಪಡೆದ ಅನೇಕ ಖಾಸಗಿ ಕ್ಲಿನಿಕ್‍ಗಳು ಅವಸರ ಅವಸರವಾಗಿ ತಮ್ಮ ಕ್ಲಿನಿಕ್‍ಗಳಿಗೆ ಬೀಗ ಹಾಕಿಕೊಂಡು ಹೋಗಿರುವ ಘಟನೆ ಸಹ ನಡೆದಿದೆ ಎಂದು ತಿಳಿದುಬಂದಿದೆ.
ಅನಧಿಕೃತವಾಗಿ ಆಸ್ಪತ್ರೆ ಪ್ರಾರಂಭಿಸಿದ್ದಕ್ಕೆ ನೋಟಿಸ್ ಜಾರಿ ಮಾಡಿದರಲ್ಲದೇ, ಮೂರ್ನಾಲ್ಕು ಅನಧಿಕೃತ ಕ್ಲಿನಿಕ್‍ಗಳನ್ನು ಮುಚ್ಚಿದ್ದಾರೆ.





