Kalaburagi | ಜು.11 ರಂದು ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ

ಕಲಬುರಗಿ: ಕಲಬುರಗಿ ರಂಗಾಯಣದ ಸಂಯುಕ್ತಾಶ್ರಯದಲ್ಲಿ “ಸ್ವಾತಂತ್ರ್ಯದ ಓಟ”ನಾಟಕ ಪ್ರದರ್ಶನವು ಜು.11 ರಂದು ಶನಿವಾರ ಸಂಜೆ 6 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಡಾ.ಸುಜಾತಾ ಜಂಗಮಶೆಟ್ಟಿ ಅವರು ತಿಳಿಸಿದ್ದಾರೆ.
ಶಿವಮೊಗ್ಗ ರಂಗಾಯಣದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರ ಮಹಮ್ಮದ್ ಕುಂಞ ಅವರ ಕಾದಂಬರಿಯ ರಂಗರೂಪ, ನಟರಾಜ್ ಹೊನ್ನವಳ್ಳಿ ಅವರ ನಿರ್ದೇಶನದ ರಾಘವ ಕಮ್ಮಾರ ಇವರ ಸಂಗೀತದ, ರಂಗಾಯಣ, ಶಿವಮೊಗ್ಗ ಪ್ರಸ್ತುತಿಯ ಈ ನಾಟಕ ಪ್ರದರ್ಶನಕ್ಕೆ ಸಾರ್ವಜನಕರಿಗೆ ಪ್ರವೇಶ ಉಚಿತವಿದ್ದು, ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕ ವೀಕ್ಷೀಸಬೇಕೆಂದು ಅವರು ತಿಳಿಸಿದ್ದಾರೆ.
Next Story




