ಕಲಬುರಗಿ | ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ : ಅಶೋಕ್ ಶಾಸ್ತ್ರಿ

ಕಲಬುರಗಿ : ಓದು ನಿರಂತರವಾದರೆ ಜ್ಞಾನ ಮತ್ತು ಪರೀಕ್ಷೆಯ ಫಲಿತಾಂಶ ಉತ್ತಮವಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು, ಆಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ಶಕ್ತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಶಾಸ್ತ್ರಿ ಹೇಳಿದರು.
ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವತಿಯಿಂದ ʼದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭʼ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಓದಿನ ಕಡೆ ಗಮನ ಕೊಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ ಎಂದು ಕಿವಿ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಚ್.ನಿರಗುಡಿ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಗುರಿ ಮುಟ್ಟುವ ಕಡೆ ಪ್ರಯತ್ನ ಮಾಡಿ ಮುಂದಿನ ಭವಿಷ್ಯ ಉಜ್ವಲ ಮಾಡಿಕೊಳ್ಳಿ ಮೋಬೈಲ್ ನಿಂದ ದೂರವಿರಿ ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಹಿರಿಯ ರಾಜಕಾರಣಿ ನೀಲಕಂಠರಾವ ಮೂಲಗೆ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸವರಾಜ್ ಬಿರಾಜದಾರ್, ಹಿರಿಯ ಸಾಹಿತಿಗಳಾದ ಡಾ.ಸಿದ್ದರಾಮ ಹೊನ್ಕಲ್, ದಿಶಾ ಪಿಯು ಅಧ್ಯಕ್ಷ ಶಿವಾನಂದ ಖಜೂರಿ ಇದ್ದರು.
ಕಾರ್ಯಕ್ರಮದ ನಿರೂಪಣೆ ವಿದ್ಯಾರ್ಥಿನಿ ಮೇಘನಾ ಹಾಗೂ ಸೃಷ್ಟಿ ಮಾಡಿದರು. ಪುಷ್ಪ ಹಾಗೂ ವರ್ಷಾ ಪ್ರಾರ್ಥನೆ ಮಾಡಿದರು. ಕೇದಾರ ಸ್ವಾಗತ ಮಾಡಿದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಕಲಾವಿದರಾದ ಜ್ಯೂನಿಯರ್ ವಿಷ್ಣುವರ್ಧನ್, ಪುನೀತ್ ರಾಜಕುಮಾರ್, ಸೌಂದರ್ಯ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಮಹೇಶ್ ಗಡಗಿ, ಮಂಜುನಾಥ ಕಲಾಲ್, ಸಂತೋಷ ಪಿಳ್ಳೆ, ಅಶೋಕ ಬಿ,ರೂಪಾ ಕುಲಕರ್ಣಿ, ಗೀತಾ ಮುಲಗೆ, ರಾಜೇಶ್ವರಿ ಸಾಲಿಮಠ, ನಿರ್ಮಲಾ ಕಣ್ಮುಸೆ, ಸುಚಿತಾ ಸುತಾರ, ವಿಶ್ವಜೋತಿ ಮಠ, ಡಾ ಸುಲೋಚನಾ ಅಂಕಲಗಿ ಇದ್ದರು.







