ಕಲಬುರಗಿ | ನಿರಂತರ ಮಳೆಗೆ ತಾತ್ಕಾಲಿಕ ಸೇತುವೆ ಕುಸಿತ : ಸಂಪರ್ಕ ಕಡಿತ

ಕಲಬುರಗಿ: ಭಾರೀ ಮಳೆಯಿಂದಾಗಿ ಜಿಲ್ಲೆಯ ಕಮಲಾಪುರ ಪಟ್ಟಣ ಹಾಗೂ ಜೀವಣಗಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿರುವ ಘಟನೆ ನಡೆದಿದೆ.
ಕಮಲಾಪುರ ಪಟ್ಟಣ ಹಾಗೂ ಜೀವಣಗಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯದ ಸೇತುವೆ ಬಿದ್ದು ವರ್ಷ ಕಳೆದರೂ ಮರು ನಿರ್ಮಾಣ ಮಾಡಿಲ್ಲ. ಕಾಮಗಾರಿ ನೆನೆಗುದಿಗೆ ಬಿದ್ದಿರುವುದರಿಂದ ಪ್ರವಾಹದಿಂದ ಮತ್ತಷ್ಟು ನೀರು ಹೊಕ್ಕಿ ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆ ಸಹ ಒಡೆದು ಹೋಗಿದ್ದು, ಈ ಕಡೆಗಳಲ್ಲಿ ಸಂಚರಿಸುವ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಈ ನಡುವೆ ಈ ಸೇತುವೆಯಲ್ಲಿ ಸಂಚಾರ ಮಾಡುವ ಹಲವು ಪ್ರಯಾಣಿಕರು ಸಹ ಪರದಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹೋರಾಟಗಾರರು, ಸ್ಥಳೀಯರು ಕೂಡಲೇ ರಸ್ತೆ ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ.
Next Story





