Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಬಂಜಾರ ಸಮುದಾಯದ ಜನರನ್ನು ಇಡೀ...

ಕಲಬುರಗಿ | ಬಂಜಾರ ಸಮುದಾಯದ ಜನರನ್ನು ಇಡೀ ಸಮಾಜವೇ ಪ್ರೀತಿಯಿಂದ ಕಾಣುತ್ತದೆ : ಮಾಲೀಕಯ್ಯ ಗುತ್ತೇದಾರ್

ವಾರ್ತಾಭಾರತಿವಾರ್ತಾಭಾರತಿ24 April 2025 11:04 PM IST
share
ಕಲಬುರಗಿ | ಬಂಜಾರ ಸಮುದಾಯದ ಜನರನ್ನು ಇಡೀ ಸಮಾಜವೇ ಪ್ರೀತಿಯಿಂದ ಕಾಣುತ್ತದೆ : ಮಾಲೀಕಯ್ಯ ಗುತ್ತೇದಾರ್

ಕಲಬುರಗಿ : ಬಂಜಾರ ಸಮುದಾಯದ ಜನರನ್ನು ಇಡೀ ಸಮಾಜವೇ ಪ್ರೀತಿಯಿಂದ ಕಾಣುತ್ತದೆ. ಈ ಸಮುದಾಯದಲ್ಲಿರುವ ಒಳ್ಳೆಯತನವೇ ಇದಕ್ಕೆ ಕಾರಣ. ಬಂಜಾರ ಜನರು ಕೇವಲ ಮುಗ್ಧರಲ್ಲ, ಅವರಲ್ಲಿರುವ ಕಲೆ ಮತ್ತು ಕೌಶಲ್ಯಗಳು ಅದ್ಭುತವಾಗಿವೆ. ಅದಕ್ಕಾಗಿ ಈ ಬಂಜಾರ ಸಂಸ್ಕೃತಿಯನ್ನು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಮಾಲೀಕಯ್ಯ ಗುತ್ತೇದಾರ್ ಹೇಳಿದರು.

ಅವರು ಅಫಜಲ್ಪುರ ಪಟ್ಟಣದಲ್ಲಿ ಬಂಜಾರ ಜನ ಜಾಗೃತಿ ಸಮುದಾಯವು ಏರ್ಪಡಿಸಿದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡರಾದ ನಿತಿನ್ ಗುತ್ತೇದಾರ್ ಅವರು ಮಾತನಾಡಿ, ಬಂಜಾರ ಸಮುದಾಯದಲ್ಲಿ ಕುಟುಂಬದ ಬಗ್ಗೆ ಪ್ರೀತಿ ಮತ್ತು ತಮ್ಮ ಸಮುದಾಯದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇದೆ. ಇದು ಸಂತೋಷದ ವಿಷಯ. ಆಧುನಿಕ ಯುಗದಲ್ಲಿ ಸಮಾಜ ಮತ್ತು ಸಂಬಂಧಗಳು ಒಡೆದು ಹೋಗುತ್ತಿರುವ ದಿನಮಾನಗಳಲ್ಲಿ ಇಂಥ ಜನರ ಅವಶ್ಯಕತೆ ಇದೆ ಎಂದರು.

ಬೆಂಗಳೂರಿನ ಡಿಆರ್‌ಡಿಓ ವಿಜ್ಞಾನಿ ಅರ್ಜುನ ರಾಠೋಡ ಮಾತನಾಡಿ, ಶಿಕ್ಷಣದ ಮಹತ್ವವನ್ನು ನಮ್ಮ ಜನಾಂಗ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಮಾಜಿ ಸಂಸದರಾದ ಡಾ.ಉಮೇಶ್ ಜಾಧವ್ ಅವರು ಮೆರವಣಿಗೆಯ ಸಂದರ್ಭದಲ್ಲಿ ಜನರೊಂದಿಗೆ ಸಾಗಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬಿಗ್ ಬಾಸ್ ವಿನ್ನರ್ ಖ್ಯಾತಿಯ ಹಣಮಂತ ಲಮಾಣಿ ಅವರ ಜಾನಪದ ಹಾಡುಗಾರಿಕೆಯನ್ನು ಏರ್ಪಡಿಸಲಾಗಿತ್ತು. ನಟಿ ಕಲ್ಪನಾ ಪವಾರ್ ಅವರು ಬಂಜಾರ ಹಾಡಿಗೆ ನೃತ್ಯ ಪ್ರದರ್ಶನ ಮಾಡಿ ಜನಸಮೂಹದಲ್ಲಿ ಸಂಚಲನ ಉಂಟುಮಾಡಿದರು. ಅಫಜಲಪುರ ತಾಲೂಕಿನಲ್ಲಿ ಉನ್ನತ ರ್‍ಯಾಂಕ್ ಗಳಿಸಿದ ವಿವಿಧ ವಿದ್ಯಾರ್ಥಿಗಳನ್ನು ಮತ್ತು ಸಮಾಜದ ಉನ್ನತ ಸರಕಾರಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪ್ರಕಾಶ್ ಚೌಹಾನ್ ಬಿಜಾಪುರ, ಖೇ ರಾಜಕುಮಾರ ಚೌಹಾಣ್, ಖೆಮಸಿಂಗ ರಾಠೋಡ ,ಬಿ.ಎನ್. ಚೌಹಾಣ್, ಅರವಿಂದ ದೊಡ್ಡಮನಿ, ವಿಠ್ಠಲ ಜಾದವ್, ಡಾ.ವಿನೋದ ರಾಠೋಡ, ಪ್ರೇಮಕುಮಾರ ರಾಥೋಡ, ಲಕ್ಷ್ಮಣ ಸಿಂಗ್ ಪವಾರ, ಪುರಸಭೆ ಸದಸ್ಯ ವಿನೋದ ರಾಠೋಡ, ಗೋಪಾಲ ಪವಾರ್, ಸೂರ್ಯಕಾಂತ ರಾಥೋಡ, ಚಂದ್ರಕಾಂತ ರಾಠೋಡ್, ಚಂದ್ರಶೇಖರ ಕರಜಗಿ ಹಣಮಯ್ಯ ಗುತ್ತೇದಾರ್, ಯಲ್ಲಾಲಿಂಗ ಪೂಜಾರಿ ಸೇರಿದಂತೆ ಇತರರು ಹಾಜರಿದ್ದರು.

ಬಂಜಾರ ಸಮುದಾಯದ ಮುಖಂಡರಾದ ಜೇಮ ಸಿಂಗ್ ಮಹಾರಾಜ, ಸುರೇಶ ಮಹಾರಾಜ, ಬಳಿರಾಮ ಮಹಾರಾಜ, ಶ್ರೀಮಾತಾ ಕಲಾವತಿ ದೇವಿ, ಮುರಾರಿ ಮಹಾರಾಜ ಚೌಡಾಪುರ ಇವರು ಸಾನಿಧ್ಯವನ್ನು ವಹಿಸಿದ್ದರು.

ಜಗನ್ನಾಥ ರಾಥೋಡ, ನಾಥುರಾಮ ರಾಥೋಡ, ರವೀನಾಥ ರಾಥೋಡ, ಗಿಡ್ಡು ರಾಥೋಡ, ನಾಗೇಶ ರಾಠೋಡ, ರಾಜಕುಮಾರ ಪವಾರ, ಮನೋಹರ ರಾಥೋಡ, ಕಾಂತು ಪವಾರ, ರಾಜಕುಮಾರ, ಚೌಹಾಣ, ಶ್ರೀಧರ ರಾಥೋಡ, ರಮೇಶ ರಾಥೋಡ, ಸುಧೀರ ರಾಥೋಡ, ರಾಜು ಚಂ ಚೌಹಾಣ, ಭೀಮು ರಾಥೋಡ, ಕಾಂತು ಚೌಹಾಣ ಮತ್ತು ಇತರರು ಉಪಸ್ಥಿತರಿದ್ದರು.

ಮೋಹನ ರಾಥೋಡ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರಾಜಕುಮಾರ್ ಮುಖ್ಯೋಪಾಧ್ಯಾಯರು ಪ್ರಾರ್ಥನಾ ಗೀತೆ ಹಾಡಿದರು , ಜಗನ್ನಾಥ ರಾಥೋಡ ವಂದನಾರ್ಪಣೆ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X