ಕಲಬುರಗಿ | ಡಾ.ಶರಣಬಸವಪ್ಪ ಅವರ ನಿಧನಕ್ಕೆ ಖ್ವಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಸಂತಾಪ

ಸೈಯದ್ ಮುಹಮ್ಮದ್ ಅಲಿ ಹುಸೈನಿ
ಕಲಬುರಗಿ: ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಶ್ರೀ ಶರಣಬಸವೇಶ್ವರರ ಸಂಸ್ಥಾನದ ಎಂಟನೇ ಪೀಠಾಧಿಪತಿಗಳು ಅನ್ನದಾಸೋಹಿ ಡಾ.ಶರಣಬಸಪ್ಪ ಅಪ್ಪಾ ಅವರ ವಯೋಸಹಜ ನಿಧನಕ್ಕೆ ಖ್ವಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ, ಕೆಬಿಎನ್ ವಿಶ್ವ ವಿದ್ಯಾಲಯದ ಕುಲಪತಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಸಂತಾಪ ಸೂಚಿಸಿದ್ದಾರೆ.
ಅಕ್ಷರ ದಾಸೋಹಿ, ಶಿಕ್ಷಣ ಪ್ರೇಮಿ, ಕಾಯಕಯೋಗಿ, ವಿಭೂತಿ ಪುರುಷ ಎಂದೆ ಖ್ಯಾತಿ ಪಡೆದ ಡಾ.ಶರಣಬಸಪ್ಪ ಅಪ್ಪಾ ಅವರು ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹೊಸ ಅಧ್ಯಾಯ ಬರೆದು ದಶಕಗಳಿಂದ ಈ ಭಾಗದ ಜನರಿಗೆ ಶಿಕ್ಷಣ ದಾಸೋಹ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಜಾ ಬಂದಾ ನವಾಜ್ ಮತ್ತು ಶ್ರೀ ಶರಣಬಸವೇಶ್ವರ ಸಂಸ್ಥಾನಗಳು ಎರಡು ಕಣ್ಣುಗಳು ಇದ್ದಂತೆ. 8ನೇ ಪೀಠಧಿಪತಿಗಳ ನಿಧನವು ಈ ಭಾಗ ಮತ್ತು ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





