Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಕಲಬುರಗಿ | ಸಹಸ್ರಾರು ಭಕ್ತರ ಮಧ್ಯೆ...

ಕಲಬುರಗಿ | ಸಹಸ್ರಾರು ಭಕ್ತರ ಮಧ್ಯೆ ಜರುಗಿದ ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವ

ವಾರ್ತಾಭಾರತಿವಾರ್ತಾಭಾರತಿ19 March 2025 9:26 PM IST
share
ಕಲಬುರಗಿ | ಸಹಸ್ರಾರು ಭಕ್ತರ ಮಧ್ಯೆ ಜರುಗಿದ ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವ

ಕಲಬುರಗಿ: 18 ನೇ ಶತಮಾನದ ಶರಣ ಶ್ರೀ ಶರಣಬಸವೇಶ್ವರರ 203ನೇ ಪುಣ್ಯತಿಥಿ ಸ್ಮರಣಾರ್ಥ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಹಾ ರಥೋತ್ಸವವು ಬುಧವಾರ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಮಧ್ಯೆ ಯಶಸ್ವಿಯಾಗಿ ಜರುಗಿತು.

ನಿಗದಿತ ಸಮಯದಲ್ಲಿ, ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ರಥೋತ್ಸವದ ಆರಂಭವನ್ನು ಸೂಚಿಸುವ ಶಂಖ ಊದಿದರು. ಶರಣಬಸವೇಶ್ವರ ವಿಗ್ರಹವನ್ನು ಹೊತ್ತ ಹಾಗೂ ಸುಂದರವಾಗಿ ಅಲಂಕರಿಸಿದ ರಥವನ್ನು ದೇವಾಲಯದ ಸಂಕೀರ್ಣದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಶರಣಬಸವಪ್ಪ ಅಪ್ಪಾಜಿ ಮತ್ತು 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರನ್ನು ಸ್ತುತಿಸುವ ಜಯ ಘೋಷಣೆಗಳ ನಡುವೆ ಎಳೆಯಲಾಯಿತು.

ರಥ ಎಳೆಯುವ ಸಮಯದಲ್ಲಿ ದೇವಾಲಯದ ಸಂಕೀರ್ಣದ ಸುತ್ತಲೂ ವಿವಿಧ ಸ್ಥಳಗಳಿಂದ ಬಣ್ಣಗಳ ಚಿತ್ತಾರ ಮೂಡಿ ಬಂದವು. ಮುಂಜಾನೆಯಿಂದಲೇ ಬಂದ ಭಕ್ತರು ಬಾಳೆಹಣ್ಣು ಮತ್ತು ಖರ್ಜೂರವನ್ನು ಎಸೆದು ಪುನೀತರಾದರು. ದೇವಾಲಯ ಸಂಕೀರ್ಣದಲ್ಲಿ ಸೇರಿದ್ದ ಜನಸ್ತೋಮ ಹಬ್ಬಕ್ಕೆ ಅಗತ್ಯವಾದ ರಂಗನ್ನು ಸೂಚಿಸುತ್ತಿತ್ತು.

ಇದಕ್ಕೂ ಮುನ್ನ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ಸುಂದರವಾಗಿ ಅಲಂಕರಿಸಲ್ಪಟ್ಟ ರಥಕ್ಕೆ ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿ, ವಿಶೇಷ "ನೈವೇದ್ಯ" ಅರ್ಪಿಸಿದರು. ದೇವಾಲಯದ ಪಕ್ಕದಲ್ಲಿರುವ ದಾಸೋಹ ಮಹಾಮನೆಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಆವರಣದಲ್ಲಿ ತಮ್ಮ ತಂದೆ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಅಪ್ಪಾಜಿ ಹಾಗೂ ತಮ್ಮ ತಾಯಿ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಸಹೋದರಿಯರಾದ ಭವಾನಿ, ಶಿವಾನಿ ಮತ್ತು ಮಹೇಶ್ವರಿ ಅವರೊಂದಿಗೆ ರಥೋತ್ಸವವನ್ನು ವೀಕ್ಷಿಸಿದರು.

ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ.ಅಲ್ಲಮಪ್ರಭು ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲ ಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ದೇವಾಲಯ ಸಂಕೀರ್ಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪೂಜ್ಯ ಡಾ.ಅಪ್ಪಾಜಿ ಮತ್ತು ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಜಂಟಿಯಾಗಿ ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ಸೇವಿಸುತ್ತಿದ್ದ ಬೆಳ್ಳಿ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸುತ್ತಿದ್ದ ಪವಿತ್ರ ಲಿಂಗ ಇರಿಸುವ ಬೆಳ್ಳಿ ಪೆಟ್ಟಿಗೆ) ಯನ್ನು ಭಕ್ತ ಸಮೂಹಕ್ಕೆ ಪ್ರದರ್ಶಿಸಿದರು.

ಈ ದಿನ ಸಂತರ ಪುಣ್ಯತಿಥಿಯನ್ನು ಭಕ್ತರು ದಿನವಿಡೀ ಉಪವಾಸ ಮಾಡುವ ಮೂಲಕ ಪವಿತ್ರ ದಿನವೆಂದು ಆಚರಿಸಿ ಪೂಜೆಗಳನ್ನು ಮಾಡುತ್ತಾರೆ ಮತ್ತು ರಥೋತ್ಸವದ ನಂತರ ಸಿಹಿತಿಂಡಿಗಳು ಸೇರಿದಂತೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ಸೇವಿಸುತ್ತಾರೆ. (ಲಿಂಗಾಯತರು ಸಾವನ್ನು ಮೋಕ್ಷವೆಂದು ವೈಭವೀಕರಿಸಿ ಆಚರಿಸುತ್ತಾರೆ ಮತ್ತು ಧಾರ್ಮಿಕ ಮುಖ್ಯಸ್ಥರ ಪುಣ್ಯತಿಥಿಗಳನ್ನು ಭಕ್ತರು ವಿಶೇಷವಾಗಿ ಹಬ್ಬವಾಗಿ ಆಚರಿಸುತ್ತಾರೆ).

ಇಡೀ ಕಲಬುರಗಿ ನಗರದಾದ್ಯಂತ ಹೂವಿನ ಅಲಂಕಾರಗಳೊಂದಿಗೆ ಹಬ್ಬದ ವಾತವರಣವನ್ನು ಹೊಂದಿತ್ತು.

ಸಂತ ಶರಣಬಸವೇಶ್ವರರು ಬೋಧಿಸಿದ ಮತ್ತು ಆಚರಿಸಿದ ದಾಸೋಹದ ಸಂಪ್ರದಾಯಗಳಿಗೆ ಅನುಗುಣವಾಗಿ, ಇಡೀ ನಗರವು ದಾಸೋಹ ಮಹಾಮನೆಯಾಗಿ ರೂಪಾಂತರಗೊಂಡಿತು, ಜನರು ಶರಣಬಸವೇಶ್ವರ ದೇಗುಲಕ್ಕೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಪೆಂಡಾಲ್‍ಗಳು ಮತ್ತು ವಿಶೇಷ ಮಳಿಗೆಗಳನ್ನು ಸ್ಥಾಪಿಸಿ, ಪೂಜೆ ಸಲ್ಲಿಸಲು ದೇಗುಲಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಉಚಿತ ಆಹಾರ ಮತ್ತು ನೀರನ್ನು ನೀಡುತ್ತಿದ್ದರು.

ಉತ್ತಮ ಕಾರ್ಯವಾಗಿ, ನಗರ ಕೇಂದ್ರ ಬಸ್ ನಿಲ್ದಾಣದ ಎದುರಿನ ಸೆಂಟ್ರಲ್ ಮಾಲ್‍ನ ಪಕ್ಕದಲ್ಲಿರುವ ಆಟೋರಿಕ್ಷಾ ಸ್ಟ್ಯಾಂಡ್‍ನಲ್ಲಿರುವ ಚಾಲಕರು ದೂರದ ಸ್ಥಳಗಳಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಸಾರಿಗೆಯನ್ನು ಒದಗಿಸಿದರು ಮತ್ತು ಬಸ್ ನಿಲ್ದಾಣಕ್ಕೆ ಹಿಂತಿರುಗಲು ಉಚಿತವಾಗಿ ಅವಕಾಶ ನೀಡಿದರು.

ಸಂತ ಶರಣಬಸವೇಶ್ವರರ ಭಕ್ತರು ತಮ್ಮ ಆಸೆಗಳನ್ನು ಈಡೇರಿಸಲು, ನಿಸ್ವಾರ್ಥ ಸೇವೆಗೆ ಮಾದರಿಯಾಗಿದ್ದ, ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದ ಸಂತನಿಗೆ ನಮನ ಸಲ್ಲಿಸಲು ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳ ದೂರದ ಸ್ಥಳಗಳಿಂದ ತಮ್ಮ ಹಳ್ಳಿಗಳಿಂದ ಮೈಲುಗಟ್ಟಲೆ ನಡೆದುಕೊಂಡು ಬರುತ್ತಿದ್ದರು.

ಹೊಸದಾಗಿ ರಾಶಿ ಮಾಡಿದ ಜೋಳದಿಂದ ತಯಾರಿಸಿದ ವಿಶೇಷ ಖಾದ್ಯವಾದ “ಹುಳಿಬಾನ”ವನ್ನು ಒಳಗೊಂಡಿರುವ ವಿಶೇಷವಾಗಿ ತಯಾರಿಸಿದ "ನೈವೇದ್ಯ"ವನ್ನು ಅರ್ಪಿಸುವುದು ಮತ್ತು ಇದನ್ನು ಹಸುವಿನ ಹಾಲಿನಿಂದ ತಯಾರಿಸಿದ ತಾಜಾ ಮೊಸರಿನೊಂದಿಗೆ ಬೆರೆಸಿ ಇತರ ಪದಾರ್ಥಗಳನ್ನು ಇದರಲ್ಲಿ ಸೇರಿಸಲಾಗುತ್ತದೆ. ಎಲ್ಲಾ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಿ ತಯಾರಿಸಲಾದ ಈ ಖಾದ್ಯವನ್ನು ಈ ಕಾರ್ಯಕ್ಕಾಗಿ ವಿಶೇಷವಾಗಿ ನೇಮಿಸಲ್ಪಟ್ಟ ವ್ಯಕ್ತಿ ತಲೆಯ ಮೇಲೆ ಹೊತ್ತುಕೊಳ್ಳುತ್ತಾನೆ.

ಹುಳಿಬಾನವನ್ನು ತಲೆಯ ಮೇಲೆ ಧರಿಸಿದ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಮತ್ತು ರಥವು ಅದರ ಮೂಲ ಸ್ಥಳಕ್ಕೆ ಹಿಂತಿರುಗಿದ ನಂತರ ಐದು ಬಾರಿ ರಥವನ್ನು ಪ್ರದಕ್ಷಿಣೆ ಹಾಕುವುದು ವಾಡಿಕೆ.

ದೇವಾಲಯ ಸಂಕೀರ್ಣದೊಳಗಿನ ಭದ್ರತಾ ವ್ಯವಸ್ಥೆಗಳು ಪರಿಪೂರ್ಣವಾಗಿದ್ದವು. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಪೊಲೀಸರು ಹಾಗೂ ಗುರುತಿಸಲ್ಪಟ್ಟ ಭಕ್ತರು ಮತ್ತು ಸ್ವಯಂಸೇವಕರ ವಿಶೇಷ ಗುಂಪು ರಥವನ್ನು ಎಳೆಯುವ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿದ್ದರು.

ದಾಸೋಹ ಮಹಾಮನೆಗೆ ಪ್ರವೇಶವನ್ನು ಸಹ ನಿಬರ್ಂಧಿಸಲಾಗಿತ್ತು. ಅಧಿಕೃತ ಮತ್ತು ಪೂಜ್ಯ ಡಾ.ಅಪ್ಪಾಜಿಯವರ ಸಂಬಂಧಿಕರ ಪ್ರಮುಖ ಅತಿಥಿಗಳಿಗೆ ಮಾತ್ರ ಮಹಾಮನೆಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

ರಥೋತ್ಸವಕ್ಕೆ ಸಾಕ್ಷಿಯಾದ ಪ್ರಮುಖರಲ್ಲಿ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ ಪಾಟೀಲ, ಹಿರಿಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ಶೇಖರ ಪಾಟೀಲ, ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಬಿಜೆಪಿ ಎಂಎಲ್‍ಸಿ ಬಿ.ಜಿ.ಪಾಟೀಲ್ ಮತ್ತು ಇತರ ಗಣ್ಯರು ಈ ರಥೋತ್ಸವದಲ್ಲಿ ಭಾಗಿಯಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X