Kalaburagi | ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ: ಶಶೀಲ್ ಜಿ. ನಮೋಶಿ

ಕಲಬುರಗಿ: ಸರ್ಕಾರಿ ನೌಕರರ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸುವ ಮೂಲಕ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕರು ಹಾಗೂ ಸಮಾಜದ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.
ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಸಮೀಪದ ಎಂ.ಆರ್.ಎಂ.ಸಿ. ಸ್ಯಾಕ್ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ (ನಿ.), ಕಲಬುರಗಿ ವತಿಯಿಂದ ಆಯೋಜಿಸಿದ್ದ 53ನೇ ವಾರ್ಷಿಕ ಮಹಾಸಭೆಯ ಮುಂದುವರಿದ ವಿಶೇಷ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿಯ ಶಕ್ತಿ ಪೀಠದ ಪರಮಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ. ವಿಠಲ್ ವಗ್ಗನ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸೂರ್ಯಕಾಂತ ಕದಮ ಮಾತನಾಡಿದರು.
ಸಂಘದ ಅಧ್ಯಕ್ಷ ಅರುಣಕುಮಾರ ಎನ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆನಂದತೀರ್ಥ ಜೋಶಿ, ಕೋಶಾಧ್ಯಕ್ಷ ಸಿದ್ದಣ್ಣ ಬಿ. ಪೂಜಾರಿ, ನಿರ್ದೇಶಕರಾದ ನಾಗಪ್ಪ ಕೆ. ಹೊನ್ನಳ್ಳಿ, ಭರತರಾಜ ಬೀರಣ್ಣ ಸಾವಳಗಿ, ಬಸವರಾಜ ಬಳುಂಡಗಿ, ವಿಶ್ವನಾಥ ಎಸ್. ಕಟ್ಟಿಮನಿ, ಈರಣ್ಣ ಎಸ್. ಪಾಟೀಲ, ಸೋಮಶೇಖರ ಮಠ, ಸಿದ್ದಲಿಂಗ ಬಿ. ಕುಲಕರ್ಣಿ, ಅಣ್ಣಾರಾವ್ ಹಾಬಾಳಕರ್, ಎಸ್.ಪಿ. ಸುಳ್ಳದ, ವಿಜಯಕುಮಾರ ಸೋಮನೂರು, ಲಕ್ಷ್ಮೀಕಾಂತ ಡಿ. ಪೊಲೀಸ್ ಪಾಟೀಲ, ಜಯಶ್ರೀ ರವಿ ಪಾಟೀಲ, ಪ್ರಮೀಳಾ ಎಚ್. ಪಾಟೀಲ, ಕಾರ್ಯದರ್ಶಿ ಭೀಮರೆಡ್ಡಿ ಉಡಮನಾಳ, ರೇಣುಕಾ ಆರ್. ಡಾಂಗೆ, ನಂದಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.






