ಕಲಬುರಗಿ | ವಚನ ಚಾರಿಟೇಬಲ್ ಸೊಸೈಟಿಯ ಕಾರ್ಯ ಶ್ವಾಘನೀಯ : ಬಸವರಾಜ ದೇಶಮುಖ

ಕಲಬುರಗಿ : ವೈಚಾರಿಕತೆಯ ನಿಲುವು, ಸಮಭಾವ ಸಮನ್ವಯತೆ ಒಗಟ್ಟಿನಿಂದ ಘನವಾದ ಉದ್ದೇಶ ಇಟ್ಟುಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಕ್ರಾಂತಿ ಮಾಡುತ್ತಿರುವ ವಚನ ಚಾರಿಟೇಬಲ್ ಸೊಸೈಟಿ ಕಾರ್ಯ ಶ್ವಾಘನೀಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ವಚನ ಚಾರಿಟೇಬಲ್ ಸೊಸೈಟಿ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಶಿವಶರಣ ಹರಳಯ್ಯ ನಾಟಕೋತ್ಸವವನ್ನು ಸಸಿಗೆ ನೀರೆರೆದು ಬಸವರಾಜ ದೇಶಮುಖ ಮಾತನಾಡಿ, ನಾಟಕದಿಂದ ಕಲೆ, ಸಾಹಿತ್ಯ, ಸಂಸ್ಕೃತಿ, ಆಳವಾಗಿ ಅರಿಯಲು ಇದೊಂದು ಸುಲಭವಾಗ ಮಾರ್ಗ ಎಂದರು.
ಶರಣರ ತತ್ವ ಸಿದ್ಧಾಂತ ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸಮೃದ್ಧಿ ಸಾಧಿಸಬಹುದೆಂದು ಹೇಳಿದರು.
ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆಯಲ್ಲಿ ಕನ್ನಡ ಒಂದಾಗಿದೆ. ಕನ್ನಡ ಎಂದರೇ ಕುಣಿದಾಡುವುದು ಎನ್ನ ಮನ ಎಂಬ ಕವಿವಾಣಿ ಮಾತು ಮೊಳಗಬೇಕು. ಕನ್ನಡ ಇದು ತಾಯಿ ಭಾಷೆ ಜೊತೆಗೆ ಅನ್ನ ಕೊಡುವ ಭಾಷೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ವಚನಗಳು ಮೆದುಳುಗಳಾಗಿವೆ. ಧಾವಂತದ ಬದುಕಿನಲ್ಲಿ ಸತ್ಯಶುದ್ಧ ಕಾಯಕ ಪ್ರಗತಿ ಪರ ಚಿಂತನೆಯಿಂದ ವಚನ ಸಮೂಹ ಸಂಸ್ಥೆ 15 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ ಎಂದು ಪ್ರೊ.ಸಿದ್ದು ಯಾಪಲಪರವಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ನಾಟಕ ಮನಸ್ಸು ಕಟ್ಟುವ ಸಾಂಸ್ಕೃತಿಕ ಉತ್ಸವ ಇದಾಗಿದೆ. ಬಸವಾದಿ ಶರಣರು ಕನ್ನಡ ಭಾಷೆ ಜೊತೆಗೆ ಬಾಂಧವ್ಯ, ಇತಿಹಾಸ, ಪರಂಪರೆಗೆ ಒತ್ತು ಕೊಟ್ಟು ಕ್ರಾಂತಿಮಾಡಿರುವುದು ಸತ್ಯ ಇದನ್ನು ನಾವೆಲ್ಲರು ಮನಗಾಣಬೇಕೆಂದರು.
ಕಾರ್ಯನಿರತ ಪತ್ರ ಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ವಹಿಸಿ ಧನಾತ್ಮಕ ವಿಚಾರ ದೂರದೃಷ್ಟಿಯ ಕಲ್ಪನೆಯಿಂದ ಬಸವಕಲ್ಯಾಣದ ಹತ್ತಿರ ಅನುಭವ ಮೆಗಾಸಿಟಿಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ಡಿ.20 ರಂದು ಲೋಕಾರ್ಪಣೆ ಮಾಡುವ ಸಂಧರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ 1 ಲಕ್ಷ 96 ಸಾವಿರ ಜನರನ್ನು ಸೇರಿಸುವ ಉದೇಶ ಹೊಂದಿದು ನಮ್ಮ ಸಂಸ್ಥೆಯ ಮೇಲೆ ತಮ್ಮ ಸಹಕಾರ ಇರಲಿ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಕೋರಣೇಶ್ವರ ಸ್ವಾಮಿಗಳು ಶ್ರೀ ತೋಂಟದಾರ್ಯ ಅವರು ವಹಿಸಿದ್ದರು.
ವೇದಿಕೆ ಮೇಲೆ ಆರ್.ಜಿ ಶೆಟಕಾರ, ಭೀಮಣ್ಣಾ ಬೋನಾಳ, ಅನ್ಯುಣ್ಣ ನಂದಿ ಕಾಶಿನಾಥ ದಿವಾಂಟಗಿ, ಡಾ.ಚಿತ್ರಶೇಖರ ವಾಗರಗಿ, ಶಿವಶಂಕರ ಟೋಕರೆ, ಶಿವಕುಮಾರ ಸಾಲಿ, ಬಾಬುರಾವ ಪಾಟೀಲ, ಶಿವಲಿಂಗಪ್ಪ ಗಣಪತಿ, ಅಶೋಕ ಘೂಳೆ, ರಾಜಶೇಖರ ಪಾಟೀಲ, ರವೀಂದ್ರ ಶಾಬಾದಿ ಉಪಸ್ಥಿತಿ ಇದ್ದರು.
ಮೊದಲಿಗೆ ಕಲ್ಯಾಣ ನಾಡು ಗ್ರಾಮೀಣಜನಪದ ಕಲಾ ಸಂಘ ಬಸವಕಲ್ಯಾಣ ಇವರು ಸಂಗೀತ ಕಾರ್ಯಕ್ರಮ ಜೊತೆಗೆ ನಾಡಗೀತೆ ಪ್ರಸ್ತುತ ಪಡಿಸಿದರು. ಬಸವರಾಜ ಮೊರಬದ ಸ್ವಾಗತಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರೆ, ಅಂಬರಾಯ ಬಿರಾದರ ವಂದಿಸಿದರು. ಕೊನೆಯಲ್ಲಿ ಶತಯುಷಿ ಲಿಂ.ವಿ.ಸಿದ್ಧರಾಮಣ್ಣನವರು ರಚಿಸಿದ ಶಿವಶರಣ ಹರಳಯ್ಯ ನಾಟಕವನ್ನು ಸಿರಗುಪ್ಪದ ಧಾತಿ ಸಂಸ್ಥೆಯವರು ನಡೆಸಿಕೊಟ್ಟರು.







