ಕಲಬುರಗಿ | ಬಸವ ಸಂಸ್ಕೃತಿ ಅಭಿಯಾನದ ಮೂರನೇ ಸುತ್ತಿನ ಪೂರ್ವಭಾವಿ ಸಭೆ

ಕಲಬುರಗಿ : ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಮೂರನೇ ಸುತ್ತಿನ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಜಗದ್ಗುರು ಸಾರಂಗದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅರುಣಕುಮಾರ ಪಾಟೀಲ ಕೊಡಲಹಂಗರಗಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಕಲಬುರಗಿ ನಗರದಲ್ಲಿ ನಾ ಭೂತೊ ನಾ ಭವಿಷ್ಯತೆ ಎನ್ನುವ ಹಾಗೆ ಕಾರ್ಯಕ್ರಮ ಮಾಡಲಾಗುವುದು. ಶರಣ ಬಂಧುಗಳು ತಾವೆಲ್ಲರೂ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಎಲ್ಲಾ ಲಿಂಗಾಯತ ಉಪಜಾತಿಗಳನ್ನು ಮರೆತು ಒಗ್ಗೂಡಿ ಅಭಿಯಾನವನ್ನು ಯಶಸ್ವಿ ಮಾಡಬೇಕು” ಎಂದು ಕರೆ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, “ಸಮ ಸಮಾಜ ರಚನೆಗೆ ಒತ್ತು ನೀಡುತ್ತಾ ಬಸವಾದಿ ಶರಣರ ಆದರ್ಶಗಳನ್ನು ಜನಮಾಸದಲ್ಲಿ ತಲುಪಿಸಲು ಈ ಅಭಿಯಾನ ಬಲವಾಗಬೇಕು” ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಜಗದ್ಗುರು ಸಾರಂಗದೇಶಿಕೇಂದ್ರ ಮಹಾಸ್ವಾಮಿಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಅಶೋಕ್ ಮಾಳಿ, ರಾಜಶೇಖರ್ ಯಕಂಚಿ, ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ಸಂಗಮೇಶ ನಾಗನಹಳ್ಳಿ, ಕಲ್ಯಾಣಪ್ಪ ಪಾಟೀಲ ಮಳಖೇಡ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಶ್ರೀಶೈಲ್ ಗೂಳಿ ಶರಣ ಸಮರ್ಪಣೆ, ಪ್ರಭುಲಿಂಗ ಮಾಹಾಗಾಂವಕರ್ ವಂದಿಸಿದರು.







