ಕಲಬುರಗಿ | ಟಿಪ್ಪರ್-ಬೈಕ್ ಮಧ್ಯೆ ಅಪಘಾತ : ಇಬ್ಬರು ಮೃತ್ಯು

ಕಲಬುರಗಿ: ಟಿಪ್ಪರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಫರಹತಾಬಾದ್ ಸಮೀಪ ನಡೆದಿದೆ.
ಮೃತರನ್ನು ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದ ಬಾಗಣ್ಣ ಭೀಮರಾಯ ಆಡಿನ (31) ಹಾಗೂ ಹೈಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ, ಕಲ್ಲೂರು ಗ್ರಾಮದ ಶರಣಬಸಪ್ಪ ಓಗಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಚಾರಿ ಪೊಲೀಸ್ ಠಾಣೆ 1 ವ್ಯಾಪ್ತಿಯಲ್ಲಿ ನಡೆದಿದೆ.
Next Story





