ಕಲಬುರಗಿ | ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟ : ಮೂವರಿಗೆ ಸಣ್ಣಪುಟ್ಟ ಗಾಯ

ಕಲಬುರಗಿ : ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡು ಕಾರು ಡಿವೈಡರ್ ಗೆ ಢಿಕ್ಕಿಯಾಗಿರುವ ಘಟನೆ ನಗರದ ಎಸ್.ಟಿ.ಬಿ.ಟಿ ಕ್ರಾಸ್ ಹತ್ತಿರ ರವಿವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಢಿಕ್ಕಿಯಾದ ಕಾರಿನ ರಭಸಕ್ಕೆ ಏರ್ ಬ್ಯಾಗ್ ಓಪನ್ ಆಗಿದ್ದವು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸ್ ಠಾಣೆ - 1ರ ಪೊಲೀಸರು ಭೇಟಿ ನೀಡಿ, ಕಾರನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story





